ಮಂಗಳೂರು : ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮುಝಾಕಿತ್ ಅಹ್ಮದ್ ಪಕ್ವಿ ಅಮೆದ ಬಂಧಿತ ಆರೋಪಿ. ಈತ ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ತಪಾಸಣೆಗೆ ಒಳಪಡಿಸಿದ ಕಸ್ಟಮ್ ಅಧಿಕಾರಿಗಳು ವಿದೇಶಿ ಕರೆನ್ಸಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಓದಿ : ಎನ್ಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಡಿಶಾ ಗಡಿಯಲ್ಲಿ 681 ಕೆ.ಜಿ. ಗಾಂಜಾ ವಶ
ಬಂಧಿತನಲ್ಲಿ ಪೌಂಡ್ಸ್, ಡಾಲರ್ ಮತ್ತು ಕುವೈಟ್ನ ಕರೆನ್ಸಿಗಳಿದ್ದವು. ವಶಪಡಿಸಿಕೊಂಡ ಕರೆನ್ಸಿಗಳ ಮೌಲ್ಯ 5,52,678 ರೂಪಾಯಿ ಎಂದು ತಿಳಿದು ಬಂದಿದೆ. ಆರೋಪಿ ವಿದೇಶಿ ಕರೆನ್ಸಿಗಳನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.