ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ತಂಡದ ಪರಿಶೀಲನೆ ವೇಳೆ ವಿದೇಶಿ ಕರೆನ್ಸಿ ದೊರೆತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದೆ.
ಭದ್ರತಾ ಸಿಬ್ಬಂದಿ ಪರಿಶೀಲಿಸುವಾಗ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಲು ಸಿದ್ದನಾಗಿದ್ದ ಶಾಹುಲ್ ಹಮೀದ್ ಅವರ ಬ್ಯಾಗ್‌ನಲ್ಲಿ ಕೆಲ ಅನುಮಾನಾಸ್ಪದ ಚಿತ್ರ ಕಣ್ಣಿಗೆ ಬಿದ್ದಿದ್ದವು. ಬ್ಯಾಗ್ ತೆರೆದಾಗ 5,48,000 ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಇದರಲ್ಲಿ ಯುಎಸ್, ಚೀನಾ, ಮಲೇಷ್ಯಾ ಮತ್ತು ಟರ್ಕಿ ದೇಶದ ಕರೆನ್ಸಿಗಳು ಪತ್ತೆಯಾಗಿವೆ.
ತಕ್ಷಣ ಈ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡ ಭದ್ರತಾ ಸಿಬ್ಬಂದಿ, ಶಾಹುಲ್ ಹಮೀದ್ನನ್ನು ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.