ETV Bharat / state

ಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ 'ಫುಡ್ ಆನ್ ವಾಲ್' ಯೋಜನೆ.. ರಾಜ್ಯದ 12 ಹೋಟೆಲ್​ಗಳಲ್ಲಿ ಕಾರ್ಯಾರಂಭ - ಯೂನಿವರ್ಸೆಲ್ ನಾಲೆಡ್ಜ್ ಟ್ರಸ್ಟ್

ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು ‘ಫುಡ್ ಆನ್ ವಾಲ್’ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ರಾಜ್ಯದ 12 ಹೋಟೆಲ್​ಗಳಲ್ಲಿ ಈ ಯೋಜನೆ ಕಾರ್ಯಾರಂಭಗೊಂಡಿದೆ.

food on wall
ಫುಡ್ ಆನ್ ವಾಲ್
author img

By ETV Bharat Karnataka Team

Published : Oct 19, 2023, 11:35 AM IST

Updated : Oct 19, 2023, 12:15 PM IST

ಹಸಿದವರಿಗೆ ಊಟ ನೀಡುವ ಫುಡ್ ಆನ್ ವಾಲ್ ಯೋಜನೆ

ಮಂಗಳೂರು : ಕೈಯಲ್ಲಿ ಹಣವಿಲ್ಲದಿದ್ದರೂ ಹಸಿದವರಿಗೆ ಹೋಟೆಲ್​ನಲ್ಲಿ ಊಟ ನೀಡುವ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಾರಂಭ ಮಾಡಿದೆ. ರಾಜ್ಯದ ಏಳು ನಗರಗಳ 12 ಹೋಟೆಲ್​ಗಳಲ್ಲಿ ಫುಡ್ ಆನ್ ವಾಲ್ ಎಂಬ ಯೋಜನೆ ನಡೆಯುತ್ತಿದೆ.

ಹೌದು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು 'ಫುಡ್ ಆನ್ ವಾಲ್' ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಬಡವರ ಹಸಿವು ತಣಿಸುವ ಕಾರ್ಯವನ್ನು ಮಂಗಳೂರಿನ ರೋಹನ್ ಶಿರಿ ಅವರ ನೇತೃತ್ವದ ಯೂನಿವರ್ಸೆಲ್ ನಾಲೆಡ್ಜ್ ಟ್ರಸ್ಟ್ ಆರಂಭಿಸಿದೆ. ಬಡವರ ಹಸಿವು ತಣಿಸಲೆಂದು 'ಫುಡ್ ಆನ್ ವಾಲ್' ವ್ಯವಸ್ಥೆ ಇರುವ ಹೋಟೆಲ್ ಹೊರಗಡೆ ಅಳವಡಿಸಿರುವ ಟೋಕನ್ ತೆಗೆದುಕೊಂಡು ಕೌಂಟರ್​ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ.

ಸುಮಾರು ಒಂದು ವರ್ಷದ ಹಿಂದೆ 'ಫುಡ್ ಆನ್ ವಾಲ್' ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಮಂಗಳೂರಿನ ಚಿಲಿಂಬಿಯ ವಣಸ್, ಬಲ್ಮಠದ ಸಮಕ್ ಡೈನ್, ಕುದ್ರೋಳಿಯ ಕಿಂಗ್ಸ್ ಹೋಟೆಲ್​ ಸೇರಿದಂತೆ ಪುತ್ತೂರು, ಕಾರ್ಕಳ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಬೆಂಗಳೂರಿನ 12 ಹೋಟೆಲ್​ಗಳಲ್ಲಿ 'ಫುಡ್ ಆನ್ ವಾಲ್' ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಲಾ ಹೋಟೆಲ್​ಗಳಲ್ಲಿ ದಿನವೊಂದಕ್ಕೆ 15 ಕೂಪನ್​ನ ಊಟ ಹೋಗುತ್ತದೆ‌. ಪ್ರತಿ ಕೂಪನ್​ಗೆ ಗರಿಷ್ಠ 50 ರೂ. ಬೆಲೆಯ ಊಟ ನೀಡಲಾಗುತ್ತದೆ. ಈ ಕೂಪನ್​ಗಳ ನಿರ್ವಹಣೆಗೆ ಆ್ಯಪ್ ವ್ಯವಸ್ಥೆ ಇದೆ.

ಸಹೃದಯಿಗಳು ನೀಡಬಹುದು ನೆರವು.. ತಿಂಗಳಿಗೊಮ್ಮೆ ಹೋಟೆಲ್​ನವರಿಗೆ ಪೇಮೆಂಟ್ ಮಾಡಲಾಗುತ್ತದೆ‌. ಆ್ಯಪ್​ನಲ್ಲಿ ದಾನಿಗಳಿಗೂ ಹಣ ಸಹಾಯ ಮಾಡುವ ವ್ಯವಸ್ಥೆಯೂ ಇದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 'ಫುಡ್ ಆನ್ ವಾಲ್'ನಿಂದ 12,500 ಕ್ಕೂ ಅಧಿಕ ಮಂದಿಯ ಹಸಿವು ತಣಿಸುವ ಕಾರ್ಯವಾಗಿದೆ.

ಯಾರೇ ಹಸಿದವರು ಕೈಯಲ್ಲಿ ಹಣವಿಲ್ಲದಿದ್ದರೂ ಫುಡ್ ಆನ್ ವಾಲ್ ವ್ಯವಸ್ಥೆ ಇರುವ ಹೋಟೆಲ್​ನಲ್ಲಿ ಹೊರಗಡೆ ಇರುವ ಉಚಿತ ಕೂಪನ್ ಪಡೆದುಕೊಳ್ಳಬಹುದು. ಆ ಕೂಪನ್ ಅನ್ನು ಹೋಟೆಲ್ ಕ್ಯಾಶ್ ಕೌಂಟರ್​ನಲ್ಲಿ ಕೊಟ್ಟರೆ ಅವರು ಊಟವನ್ನು ಕೊಡುತ್ತಾರೆ. ಈ ಮೂಲಕ ಯಾವುದೇ ಅಂಜಿಕೆ ಇಲ್ಲದೆ ಹಣವಿಲ್ಲದಿದ್ದರೂ ಊಟ ಮಾಡಬಹುದು.

ಇದನ್ನೂ ಓದಿ : ನೈರುತ್ಯ ರೈಲ್ವೆ ಮತ್ತೊಂದು ಮಹತ್ವದ ಹೆಜ್ಜೆ.. ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ ಪದಾರ್ಥ ವಿತರಣೆ

ಯೂನಿವರ್ಸೆಲ್ ನಾಲೆಡ್ಜ್ ಟ್ರಸ್ಟ್ ಕೋಶಾಧಿಕಾರಿ ಗಣೇಶ್ ಪ್ರಸಾದ್ ಮಾತನಾಡಿ, "ನಮ್ಮ ಸಂಸ್ಥೆ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಫುಡ್ ಆನ್ ವಾಲ್ ಯೋಜನೆ ಆರಂಭಿಸಲಾಗಿದೆ. ಇದೊಂದು ವಿಶೇಷ ಯೋಜನೆಯಾಗಿದ್ದು, ಹೊರಗಿನಿಂದ ನಗರಕ್ಕೆ ಬಂದ ಯಾರಿಗಾದರೂ ಕೈಯಲ್ಲಿ ದುಡ್ಡಿಲ್ಲದಿದ್ದರೆ ಅವರಿಗೆ ಊಟ ನೀಡಲಾಗುವುದು. ಒಂದೂವರೆ ವರ್ಷದಿಂದ 12,500ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಯೋಜನೆಯಲ್ಲಿ ದಾನಿಗಳು ಸಹ ಸಹಾಯ ಮಾಡುವ ವ್ಯವಸ್ಥೆ ಇದೆ. ಇದು ತುಂಬಾ ಯಶಸ್ವಿಯಾಗಿದೆ. ಬಡವರು, ಕೈಯಲ್ಲಿ ಕಾಸಿಲ್ಲದ ಮಂದಿ ಒಂದು ಹೊತ್ತಿನ ಊಟವನ್ನು ಯಾವುದೇ ಮುಜುಗರವಿಲ್ಲದೆ ಇಲ್ಲಿ ಉಚಿತವಾಗಿ ಉಣ್ಣಬಹುದಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಆಹಾರ ದಸರಾ: 2 ನಿಮಿಷದಲ್ಲಿ 8 ಬಾಳೆಹಣ್ಣು, 6 ಕೊಟ್ಟೆ ಕಡುಬು ತಿಂದ ಆಹಾರಪ್ರಿಯರು

Last Updated : Oct 19, 2023, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.