ETV Bharat / state

ಮಂಗಳೂರು: ಚಂಡಮಾರುತದಿಂದ ರಕ್ಷಿಸಲ್ಪಟ್ಟ ಐವರು ಆಸ್ಪತ್ರೆಗೆ ದಾಖಲು - five people protected by Navy team in mangalore

ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಟಗ್ ಬೋಟ್​ನಲ್ಲಿದ್ದ 9 ಮಂದಿಯನ್ನು 40 ಗಂಟೆಗಳ ಬಳಿಕ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

five-people-protected-by-navy-team-in-mangalore
ತೌಕ್ತೆ ಚಂಡಮಾರುತಕ್ಕೆ ಸಿಲುಕಿದವರ ರಕ್ಷಣೆ
author img

By

Published : May 17, 2021, 4:03 PM IST

Updated : May 17, 2021, 4:42 PM IST

ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಸಮೀಪ ನೌಕಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆಗೊಳಗಾದ 9 ಮಂದಿಯಲ್ಲಿ ಐವರು ಹಡಗಿನ ಮೂಲಕ ನಗರ ತಲುಪಿದ್ದಾರೆ.

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಟಗ್ ಬೋಟ್​ನಲ್ಲಿದ್ದ 9 ಮಂದಿಯನ್ನು 40 ಗಂಟೆಗಳ ಬಳಿಕ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ರಕ್ಷಿಸಲಾಗಿತ್ತು. ಇದರಲ್ಲಿ 4 ಮಂದಿಯನ್ನು ಹೆಲಿಕಾಪ್ಟರ್​ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು ಅವರನ್ನು ಅಲ್ಲಿಂದ ಎನ್​ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಐದು ಮಂದಿಯನ್ನು ಕೋಸ್ಟ್ ಗಾರ್ಡ್​ನ ಹಡಗಿನಲ್ಲಿ ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ.

ಹಡಗಿನಲ್ಲಿ ಬಂದ ಐವರನ್ನು ಎನ್​ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಕಾಲ ಆತಂಕದಲ್ಲಿದ್ದ 9 ಮಂದಿ ಮೀನುಗಾರರಿಗೆ ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂಡಮಾರುತದಿಂದ ರಕ್ಷಿಸಲ್ಪಟ್ಟ ಐವರು ಆಸ್ಪತ್ರೆಗೆ ದಾಖಲು
ಓದಿ: ಸೋಂಕು ಕಡಿಮೆಯಾದ ಬಳಿಕ ಎಸ್​ಎಸ್​ಎಲ್​ಸಿ ಪರೀಕ್ಷೆ ಬಗ್ಗೆ ತೀರ್ಮಾನ: ಸಚಿವ ಸುರೇಶ್ ಕುಮಾರ್

Last Updated : May 17, 2021, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.