ETV Bharat / state

ಮೀನುಗಾರಿಕಾ ಬೋಟ್ ದುರಂತ ಪ್ರಕರಣ: ಇಂದು ಇಬ್ಬರ ಮೃತದೇಹ ಪತ್ತೆ - mangalore news

ಸೋಮವಾರದಂದು ಕೇರಳದ ಕೊಯಿಕ್ಕೋಡ್​ನಿಂದ ಮೀನುಗಾರಿಕೆಗೆ ಹೊರಟ ಬೋಟ್ ಮಂಗಳೂರಿನ 43 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಸರಕು ಸಾಗಾಣೆ ಮಾಡುತ್ತಿದ್ದ ಹಡಗಿಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿತ್ತು.

Fishing boat tragedy: Two dead bodies found
ಮೀನುಗಾರಿಕಾ ಬೋಟ್ ದುರಂತ ಪ್ರಕರಣ
author img

By

Published : Apr 16, 2021, 10:40 PM IST

ಮಂಗಳೂರು: ಮಂಗಳೂರಿನ ಆಳಸಮುದ್ರದಲ್ಲಿ ನಡೆದ ಮೀನುಗಾರಿಕಾ ಬೋಟ್ ದುರಂತದಲ್ಲಿ ಕಣ್ಮರೆಯಾಗಿದ್ದ 9 ಮಂದಿಯಲ್ಲಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ.

ಸೋಮವಾರದಂದು ಕೇರಳದ ಕೊಯಿಕ್ಕೋಡ್​ನಿಂದ ಮೀನುಗಾರಿಕೆಗೆ ಹೊರಟ ಬೋಟ್ ಮಂಗಳೂರಿನ 43 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಸರಕು ಸಾಗಾಣೆ ಮಾಡುತ್ತಿದ್ದ ಹಡಗಿಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿತ್ತು.

ಹೆಚ್ಚಿನ ಓದಿಗೆ : ಮಂಗಳೂರು ಬೋಟ್​ ದುರಂತ.. ಪ್ರಾಣಾಪಾಯದಿಂದ ಪಾರಾದ ಮೀನುಗಾರ ಹೇಳಿದ್ದೇನು ಗೊತ್ತಾ..?

14ಮಂದಿ ಪಶ್ಚಿಮ ಬಂಗಾಳದ ತಮಿಳುನಾಡಿನ ಮೀನುಗಾರರಿದ್ದ ಈ ಬೋಟ್ ನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಮೂವರ ಮೃತದೇಹ ಮಂಗಳವಾರದಂದು ಪತ್ತೆಯಾಗಿತ್ತು. ಕಣ್ಮರೆಯಾಗಿದ್ದ 9 ಮಂದಿಗಾಗಿ ಆಳಸಮುದ್ರದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ನಡೆಸುತ್ತಿದ್ದರು. ಕಣ್ಮರೆಯಾದ 9 ಮಂದಿಯಲ್ಲಿ 2 ಮಂದಿಯ ಮೃತದೇಹ ಇಂದು ಪತ್ತೆಯಾಗಿದೆ.

ಮೃತದೇಹದ ಗುರುತು ಪತ್ತೆಯಾಗಿಲ್ಲ. ಉಳಿದಂತೆ ಕಣ್ಮರೆಯಾಗಿರುವ 7 ಮೀನುಗಾರರ ಹುಡುಕಾಟವನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.