ETV Bharat / state

ಈ‌ ಋತುವಿನ ಮೊದಲ ವಿದೇಶಿ ಪ್ರವಾಸಿ ಹಡಗು ಮಂಗಳೂರಿಗೆ ಆಗಮನ: ಸಾಂಪ್ರದಾಯಿಕ ಸ್ವಾಗತ - ​ ETV Bharat Karnataka

ಮಂಗಳೂರು ಬಂದರಿಗೆ ನಾರ್ವೇಜಿಯನ್ ಕ್ರೂಸ್ ಲೈನ್ಸ್ ಒಡೆತನದ ಪ್ರವಾಸಿ ಹಡಗು ಆಗಮಿಸಿದೆ.

ವಿದೇಶಿ ಪ್ರವಾಸಿ ಹಡಗು ಮಂಗಳೂರಿಗೆ ಆಗಮನ
ವಿದೇಶಿ ಪ್ರವಾಸಿ ಹಡಗು ಮಂಗಳೂರಿಗೆ ಆಗಮನ
author img

By ETV Bharat Karnataka Team

Published : Dec 8, 2023, 10:20 PM IST

ಮಂಗಳೂರು: ಪ್ರಸಕ್ತ ಋತುವಿನ ಮೊದಲ ವಿದೇಶಿ ಪ್ರವಾಸಿ ಹಡಗು 'ಸೆವೆನ್ ಸೀಸ್ ನ್ಯಾವಿಗೇಟರ್' ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನವ ಮಂಗಳೂರು ಬಂದರಿನ ಬರ್ತ್ ನಂ.04ರಲ್ಲಿ ಲಂಗರು ಹಾಕಿತು. ಬಹಾಮಾಸ್ ಧ್ವಜದ ಈ ಹಡಗು ಸುಮಾರು 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಯೊಂದಿಗೆ ಬಂದಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ 'ಚೆಂಡೆ' ಮತ್ತು 'ಯಕ್ಷಗಾನ' ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಪ್ರವಾಸಿಗರು ಕರ್ನಾಟಕ ಕಲಾಪ್ರಕಾರದ ಫೋಟೋಗಳನ್ನು ತೆಗೆದುಕೊಂಡು ಖುಷಿಪಟ್ಟರು. ಕ್ರೂಸ್ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಹ್ಲಾದಕರ ಅನುಭವ ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಪಾಸಣೆ, ತ್ವರಿತ ಸಂಚಾರಕ್ಕಾಗಿ ಕಸ್ಟಮ್ಸ್ ಕೌಂಟರ್‌ಗಳು ಮತ್ತು ಮಂಗಳೂರು ನಗರದಾದ್ಯಂತ ಸಂಚಾರಕ್ಕಾಗಿ ಬಸ್‌ಗಳು, ವಿಶೇಷ ಟ್ಯಾಕ್ಸಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ನವಮಂಗಳೂರು ಬಂದರಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಹಿರಿಯ ಪೋರ್ಟ್ ಆಫೀಸರ್‌ಗಳ ಉಪಸ್ಥಿತಿಯಲ್ಲಿ ಹಡಗಿನ ಮಾಸ್ಟರ್ ಮತ್ತು ಜಿಎಂ ಅವರನ್ನು ಸನ್ಮಾನಿಸಿದರು. ಬಂದರಿನಲ್ಲಿ ಆಯೋಜಿಸಲಾಗಿದ್ದ ಭರತನಾಟ್ಯ ಪ್ರದರ್ಶನ ಪ್ರಯಾಣಿಕರನ್ನು ರಂಜಿಸಿತು. ಪ್ರವಾಸೋದ್ಯಮ ಸಚಿವಾಲಯದ ದಕ್ಷಿಣ ಕನ್ನಡದ ಯಕ್ಷಗಾನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಸೆಲ್ಫಿ ಸ್ಟ್ಯಾಂಡ್ ಪ್ರಯಾಣಿಕರಿಗೆ ವಿಶೇಷ ಆಕರ್ಷಣೆಯಾಗಿತ್ತು.

ಹಡಗಿನ ಮಾಸ್ಟರ್ ಮತ್ತು ಜಿಎಂ ಅವರಿಗೆ ಸನ್ಮಾನ
ಹಡಗಿನ ಮಾಸ್ಟರ್ ಮತ್ತು ಜಿಎಂ ಅವರಿಗೆ ಸನ್ಮಾನ

ಕಾರ್ಕಳದ ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಸ್ಥಳೀಯ ಮಾರುಕಟ್ಟೆಯಂತಹ ವಿವಿಧ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರಯಾಣಿಕರು ಭೇಟಿ ನೀಡಿದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಸಂಜೆ 6 ಗಂಟೆಗೆ ಹೊರಟಿತು. ಮಂಗಳೂರಿಗೆ ತಮ್ಮ ಪ್ರಯಾಣದ ನೆನಪಿಗಾಗಿ ಪ್ರಯಾಣಿಕರಿಗೆ ಸ್ಮರಣಿಕೆಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಹಡಗಿನ ಒಟ್ಟಾರೆ ಉದ್ದ 173 ಮೀಟರ್ ಆಗಿದ್ದು, ತೂಕ 28,803 ಟನ್ ಮತ್ತು 7.5 ಮೀಟರ್ ಸಾಮಗ್ರಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ನಾರ್ವೇಜಿಯನ್ ಕ್ರೂಸ್ ಲೈನ್ಸ್ ಒಡೆತನದಲ್ಲಿದೆ. ಪ್ರಸಕ್ತ ಋತುವಿನಲ್ಲಿ ಒಟ್ಟು 10 ಕ್ರೂಸ್ ಹಡಗುಗಳನ್ನು ಸ್ವಾಗತಿಸಲು ನವಮಂಗಳೂರು ಬಂದರು ನಿರೀಕ್ಷಿಸುತ್ತಿದ್ದು, ಮೊದಲ ಹಡಗಿನ ಆಗಮನವಾಗಿದೆ.

ಮೇ 2024ರ ಎರಡನೇ ವಾರದವರೆಗೆ ಹಡಗು ಮುಂದುವರಿಯಲಿದೆ. ಈ ಪ್ರವಾಸಿ ಹಡಗುಗಳ ವಿದೇಶಿ ಸಂದರ್ಶಕರಿಂದ ಸ್ಥಳೀಯ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಪ್ರವಾಸೋದ್ಯಮ, ಆತಿಥ್ಯ ಮತ್ತು ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದಾಯ ಹೆಚ್ಚಿಸಲಿದೆ.

ಇದನ್ನೂ ಓದಿ: ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಬಂದರಿನಲ್ಲಿ ಶೇ.50 ರಷ್ಟು ಬೋಟ್​ಗಳ ಲಂಗರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.