ETV Bharat / state

ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಗ್ನಿ ಅವಘಡ - Fire at the Waste Management Unit

ನಗರದ ಕುಡುಪು ಬಳಿಯ ಮಂದಾರದ ನಾಗಬನದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಜೆಸಿಬಿ ಮೂಲಕ‌ ಕಸದ ರಾಶಿಯ ಮೇಲೆ ಮಣ್ಣು ಎಳೆಸಿ ಬೆಂಕಿ ನಂದಿಸಲಾಯಿತು.

Fire at the Waste Management Unit in mangalore
ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅವಘಡ
author img

By

Published : Feb 19, 2020, 3:41 PM IST

ಮಂಗಳೂರು: ನಗರದ ಕುಡುಪು ಬಳಿಯ ಮಂದಾರದ ನಾಗಬನದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು.

ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಗ್ನಿ ಅವಘಡ

ಜೆಸಿಬಿ ಮೂಲಕ‌ ಕಸದ ರಾಶಿಯ ಮೇಲೆ ಮಣ್ಣು ಎಳೆಸಿ ಬೆಂಕಿ ನಂದಿಸಲಾಯಿತು. ತಡರಾತ್ರಿ 3 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳೀಯರು ದಟ್ಟ ಹೊಗೆ ನೋಡಿ ಪಾಲಿಕೆ ಹಾಗೂ ನಿರ್ವಹಣಾ ಘಟಕದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳದಲ್ಲಿ ದುರ್ನಾತ ಹೊಮ್ಮುತ್ತಿದ್ದು, ಸುತ್ತಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಈ ಹಿಂದೆ ಸುಮಾರು 25ಕ್ಕೂ ಅಧಿಕ ಮನೆಗಳು ತ್ಯಾಜ್ಯ ರಾಶಿಯೊಳಗೆ ಹುದುಗಿ ಹೋಗಿದ್ದವು. ಈಗ ಬೆಂಕಿ ಅವಘಡಗಳಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.