ಬಂಟ್ವಾಳ: ಇಲ್ಲಿನ ಪೇಟೆಯ ಬಸ್ತಿಪಡ್ಪು ಬಳಿ ಇರುವ ಫರ್ನೀಚರ್ ಮಳಿಗೆಯೊಂದಕ್ಕೆ ಇಂದು ಬೆಂಕಿ ತಗಲಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಠೋಪಕರಣಗಳಿಗೆ ಸಿದ್ಧಪಡಿಸಲಾದ ಮರಗಳು ಸೇರಿದಂತೆ ಸೋಫಾ ಸೆಟ್ ಇತರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.