ETV Bharat / state

ವಿಡಿಯೋ ಹರಿಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸೆಂಟರ್​ ಮಾಲೀಕರ ತೇಜೋವಧೆ : ಕಾನೂನು ಕ್ರಮಕ್ಕೆ ಆಗ್ರಹ - mangalore news

ಬೀದಿ ನಾಯಿಯೊಂದು ಜ್ಯೂಸ್​ಗಳಿಗೆ ಬಳಸುವ ಮಂಜುಗಡ್ಡೆಯನ್ನು ನೆಕ್ಕುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇದು ಕದ್ರಿ ಪಾರ್ಕ್ ಬಳಿಯ ದೃಶ್ಯ ಎಂದು ಅಲ್ಲಿಯ ಜ್ಯೂಸ್ ಸೆಂಟರ್ ಮಾಲೀಕರ ತೇಜೋವಧೆ ಮಾಡಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

fake-video-of-dealer-of-kadri-park-juice-center-at-magalore

author img

By

Published : Feb 13, 2020, 4:03 AM IST

ಮಂಗಳೂರು: ಬೀದಿ ನಾಯಿಯೊಂದು ಜ್ಯೂಸ್​ಗಳಿಗೆ ಬಳಸುವ ಮಂಜುಗಡ್ಡೆಯನ್ನು ನೆಕ್ಕುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇದು ಕದ್ರಿ ಪಾರ್ಕ್ ಬಳಿಯ ದೃಶ್ಯ ಎಂದು ಅಲ್ಲಿಯ ಜ್ಯೂಸ್ ಸೆಂಟರ್ ಮಾಲೀಕರ ತೇಜೋವಧೆ ಮಾಡಲಾಗುತ್ತಿದೆ. ಈ ಮೂಲಕ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸ ಮಾಡಲಾಗುತ್ತಿದೆ ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಆರೋಪಿಸಿದರು.

ಕದ್ರಿ ಪಾರ್ಕ್ ಜ್ಯೂಸ್ ಸೆಂಟರ್

ಮಂಗಳೂರು ಮನಪಾ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಇದು ಕದ್ರಿಪಾರ್ಕ್ ಬಳಿ ಇರುವ ಜ್ಯೂಸ್ ಸೆಂಟರ್​ಗಳಲ್ಲಿರುವ ದೃಶ್ಯ ಅಲ್ಲ ಎಂದು ಖಚಿತಪಡಿಸಿದ್ದಾರೆ. ಆದರೂ ಈ ಬಗ್ಗೆ ಜಾಲತಾಣಗಳಲ್ಲಿ ಸುಳ್ಳು ದೃಶ್ಯಾವಳಿಗಳನ್ನು ಹರಿ ಬಿಟ್ಟು ವ್ಯಾಪಾರಿಗಳ ತೇಜೋವಧೆ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಸುಳ್ಳು ವೀಡಿಯೋಗಳನ್ನು ವೈರಲ್ ಮಾಡಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.