ಮಂಗಳೂರು: ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹಿರಾತು ನಂಬಿ 1,20,000 ರೂ. ನೀಡಿದ ವ್ಯಕ್ತಿಯೋರ್ವರು ಮೋಸ ಹೋದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ಕಾರು ಮಾರಾಟದ ಜಾಹೀರಾತು ನೋಡಿ ಮಂಗಳೂರಿನ ವ್ಯಕ್ತಿಯೋರ್ವರು ಅದನ್ನು ಕೊಳ್ಳುವ ಬಗ್ಗೆ ಸಂದೇಶ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಮೀನಾಕ್ಷಿದಾಸ್ ಎಂಬ ವ್ಯಕ್ತಿ ಕರೆ ಮಾಡಿ, ತಾನು ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದೇನೆ. ತನಗೀಗ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ತನ್ನ ಆಲ್ಟೋ 800 ಕಾರನ್ನು ಮಾರಾಟ ಮಾಡುವುದಾಗಿ ಕಾರಿನ ಆರ್ ಸಿ ಹಾಗೂ ಗುರುತಿನ ಚೀಟಿಯನ್ನು ವಾಟ್ಸ್‌ಅಪ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.