ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ದಿ. ಗಿರಿಜಾ ಎಕ್ಕೂರು ಸ್ಮರಣಾರ್ಥ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ಆಯೋಜನೆ ಮಾಡಲಾಗಿತ್ತು.
ದಿ.ಗಿರಿಜಾ ಎಕ್ಕೂರು ಅವರ ಪುತ್ರ ಜಯಪ್ರಕಾಶ್ ಎಕ್ಕೂರು ಅವರು ರೆಡಿಯೋ ಸಾರಂಗ್ 107.8 ಎಫ್ಎಂ ಮಂಗಳೂರು ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಹಯೋಗದಲ್ಲಿ ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಈ ಶಿಬಿರ ನಡೆಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ 80 ಜನರು ನೇತ್ರದಾನದ ಸಂಕಲ್ಪ ಮಾಡಿದರು ಎಂದು ಶಿಬಿರದ ಆಯೋಜಕ ಜಯಪ್ರಕಾಶ್ ಎಕ್ಕೂರು ತಿಳಿಸಿದರು.