ETV Bharat / state

ಬಂಟ್ವಾಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮಾಜಿ ಸೈನಿಕನ ಶವ ಪತ್ತೆ - ಕೊಳೆತ ಸ್ಥಿತಿಯಲ್ಲಿ ಮಾಜಿ ಸೈನಿಕನ ಶವ ಪತ್ತೆ

ಬಂಟ್ವಾಳದ ಕಲ್ಲೊಟ್ಟು ಮನೆ ಎಂಬಲ್ಲಿ 50 ವರ್ಷದ ರಿಚರ್ಡ್ ಫರ್ನಾಂಡಿಸ್ ಎಂಬ ಮಾಜಿ ಸೈನಿಕರೊಬ್ಬರ ಶವ ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ex soldier found dead in Bantwal
ಮಾಜಿ ಸೈನಿಕನ ಶವ ಪತ್ತೆ
author img

By

Published : Apr 29, 2020, 7:32 PM IST

ಬಂಟ್ವಾಳ (ದಕ್ಷಿಣ ಕನ್ನಡ): ತಾಲೂಕಿನ ಪಂಜಿಕಲ್ಲು ಗ್ರಾಮದ ಕಲ್ಲೊಟ್ಟು ಮನೆ ಎಂಬಲ್ಲಿ ಮಾಜಿ ಸೈನಿಕರೊಬ್ಬರ ಶವ ಕೊಳೆದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. 50 ವರ್ಷದ ರಿಚರ್ಡ್ ಫರ್ನಾಂಡಿಸ್ ಎಂಬುವವರ ಶವ ಎಂದು ಗುರುತಿಸಲಾಗಿದೆ.

ರಿಚರ್ಡ್ ಮೃತಪಟ್ಟು 4 ದಿನಗಳು ಕಳೆದಿರಬಹುದು ಎನ್ನಲಾಗುತ್ತಿದೆ. ಮನೆಯಲ್ಲಿ ಇಬ್ಬರು ಅವಿವಾಹಿತ ಸೋದರಿಯರಿದ್ದು ಇವರು ಮಾನಸಿಕ ಅಸ್ವಸ್ಥರಾಗಿರುವುದರಿಂದ ಸಹೋದರ ಮೃತಪಟ್ಟ ವಿಚಾರವೇ ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಸ್ಥಳೀಯರು ರಿಚರ್ಡ್ ಅವರನ್ನು ಕೊನೆಯ ಬಾರಿಗೆ ನೋಡಿದ್ದು ಶನಿವಾರ ಹಾಲು ತರಲು ಹೋದಾಗಲೇ ಎನ್ನಲಾಗಿದೆ. ಇದಾದ ನಂತರ ಅವರು ಹೊರಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಇಂದು ಬೆಳಗ್ಗೆ ಅನುಮಾನಗೊಂಡು ನೆರೆಯವರು ರಿಚರ್ಡ್ ಮನೆ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಎಸ್​​ಐ ಪ್ರಸನ್ನ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೊರೆಟ್ಟೋ ಚರ್ಚ್ ಧರ್ಮಗುರುಗಳು ಮತ್ತು ಚರ್ಚ್ ಪಾಲನಾ ಮಂಡಳಿ ಸದಸ್ಯರು ಕ್ಯಾಥೊಲಿಕ್ ವಿಧಿ ವಿಧಾನದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.