ETV Bharat / state

ಅಪಘಾತದಲ್ಲಿ ಬೈಕ್ ಸವಾರನಿಗೆ ಗಾಯ: ಮಾಜಿ ಶಾಸಕರ ಕಾರಲ್ಲೇ ಆಸ್ಪತ್ರೆಗೆ ರವಾನಿಸಿದ ಚಾಲಕ - etv bharatha

ಅಪಘಾತದಲ್ಲಿ ಗಾಯಗೊಂಡ ಸವಾರನನ್ನ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ ಮಾಜಿ ಶಾಸಕರ ಕಾರು ಚಾಲಕ. ಮಾನವೀಯತೆ ಮೆರೆದ ಚಾಲಕ ಕೈಕಂಬ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ .

ಆರೋಗ್ಯ ವಿಚಾರಿಸಿದ ಮಾಜಿ ಶಾಸಕ
author img

By

Published : Jun 8, 2019, 10:40 AM IST

Updated : Jun 8, 2019, 10:50 AM IST

ಮಂಗಳೂರು: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿಯಿಂದ ಗಾಯಗೊಂಡಿದ್ದ ಬೈಕ್​ ಸವಾರನನ್ನು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರ ಕಾರಿನಲ್ಲಿಯೇ‌ ಚಾಲಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಈ ‌ಘಟನೆ ನಡೆದಿದೆ. ಬೆಂಗಳೂರಿನಿಂದ ಬಂಗೇರ ಅವರು ವಿಮಾನದಲ್ಲಿ ಮಂಗಳೂರಿಗೆ ಇಂದು ವಾಪಾಸಾಗಿದ್ದರು. ಕಾರು ಚಾಲಕ ನೌಶದ್ ಕೈಕಂಬ ಅವರು ವಸಂತ ಬಂಗೇರರನ್ನು ಕರೆತರಲು ತೆರಳುತ್ತಿದ್ದರು. ಆಗ ಅಪಘಾತದಲ್ಲಿ ಗಾಯಗೊಂಡವರನ್ನು ನೋಡಿದ ಮಾಜಿ ಶಾಸಕರ ಚಾಲಕ ಅದೇ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಾಳುವನ್ನು ಬಿ.ಸಿ ರೋಡ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಾಜಿ ಶಾಸಕರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಘಟನೆ ಮಾಹಿತಿ ಪಡೆದ ವಸಂತ ಬಂಗೇರ, ಮರಳಿ ಬರುವಾಗ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

Intro:ಮಂಗಳೂರು: ಸರಕಾರಿ ಬಸ್ ವೊಂದು ಆಕ್ಟಿವಾಗೆ ಡಿಕ್ಕಿಯೊಡೆದು ಗಂಭೀರವಾಗಿ ಗಾಯಗೊಂಡ ಆಕ್ಟಿವಾ ಸವಾರರನ್ನು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರ ‌ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.Body:
ಬಂಟ್ವಾಳ ದ ಜಕ್ರಿಬೆಟ್ಟು ಎಂಬಲ್ಲಿ ಈ ‌ಘಟನೆ ನಡೆದಿದ್ದು ಘಟನೆ ವೇಳೆ ಶಾಸಕರು ಕಾರಿನಲ್ಲಿ ಇರಲಿಲ್ಲ. ಬೆಂಗಳೂರಿಗೆ ತೆರಳಿದ್ದ ಶಾಸಕರು ಇಂದು ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದು ಅವರನ್ನು ಕರೆತರಲು ಅವರ ಕಾರು ಚಾಲಕ ನೌಶದ್ ಕೈಕಂಬ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಮಾನವೀಯತೆ ಮೆರೆದ ಕಾರು ಚಾಲಕ ಗಾಯಾಳುಗಳನ್ನು ಬಿಸಿರೋಡ್ ಆಸ್ಪತ್ರೆಗೆ ದಾಖಲಿಸಿ ಮಾಜಿ ಶಾಸಕರನ್ನು ವಿಮಾನನಿಲ್ದಾಣ ದಿಂದ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಘಟನೆ ಮಾಹಿತಿ ಪಡೆದ ಮಾಜಿ ಶಾಸಕ ವಸಂತ ಬಂಗೇರ ವಾಪಾಸು ಬರುವಾಗ ಆಸ್ಪತ್ರೆ ಯಲ್ಲಿ ದಾಖಲಾದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
Reporter- vinodpuduConclusion:
Last Updated : Jun 8, 2019, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.