ETV Bharat / state

ಮಹಿಳಾ ಕಾಂಗ್ರೆಸ್​​​​​​ನಿಂದ 'ಇವಿಎಂ ತೊಲಗಿಸಿ' ಆಂದೋಲನ - kannadanews

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ನಗರದಲ್ಲಿ 'ಇವಿಎಂ ತೊಲಗಿಸಿ ಮತ ಪತ್ರ ಬಳಸಿ' ಆಂದೋಲನ ನಡೆಸಲಾಯ್ತು.

'ಇವಿಎಂ ತೊಲಗಿಸಿ' ಅಂಚೆಪತ್ರ ಆಂದೋಲನ
author img

By

Published : Jun 26, 2019, 8:31 PM IST

ಮಂಗಳೂರು: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ 'ಇವಿಎಂ ತೊಲಗಿಸಿ ಮತ ಪತ್ರ ಬಳಸಿ' ಆಂದೋಲನವು ಇಂದು ನಗರದ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗ ನಡೆಯಿತು.

ಈ ಸಂದರ್ಭ ಮಹಿಳಾ ಕಾಂಗ್ರೆಸ್​​ನ ಸದಸ್ಯೆಯರು ಇವಿಎಂ ತೊಲಗಿಸಬೇಕೆಂದು ಪತ್ರಗಳನ್ನು‌ ಬರೆದು ಪೋಸ್ಟ್‌ ಬಾಕ್ಸ್ ಮುಖಾಂತರ ರಾಷ್ಟ್ರಪತಿ ಭವನಕ್ಕೆ ರವಾನಿಸಿದರು. ಈ ವೇಳೆ ದ.ಕ‌. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ದ.ಕ‌. ಜಿಲ್ಲಾ ಮಹಿಳಾ ಕಾಂಗ್ರೆಸ್​ ವತಿಯಿಂದ ಇವಿಎಂನ್ನು ತೊಲಗಿಸಿ, ಬ್ಯಾಲೆಟ್​ ಪೇಪರ್​​ ಮುಖಾಂತರವೇ ಚುನಾವಣೆ ನಡೆಸಬೇಕೆಂದು ರಾಷ್ಟ್ರಪತಿಗಳಿಗೆ ನಮ್ಮ ಬೇಡಿಕೆಗಳನ್ನು ಅಂಚೆ ಪತ್ರಗಳ ಮುಖಾಂತರ ಬರೆದು ರಾಷ್ಟ್ರಪತಿ ಭವನಕ್ಕೆ ಪೋಸ್ಟ್ ಮಾಡುತ್ತಿದ್ದೇವೆ ಎಂದ್ರು. ಇಂದು ಏಕಕಾಲದಲ್ಲಿ ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್​ಗಳನ್ನು ರಾಷ್ಟ್ರಪತಿ ಭವನಕ್ಕೆ ಪೋಸ್ಟ್‌ ಮಾಡುತ್ತಿದ್ದೇವೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೊದಲಿನಿಂದ ಇರುವ ಬ್ಯಾಲೆಟ್​ ಪೇಪರ್​ ಚುನಾವಣೆಯೇ ಇರಲಿ ಎಂದು ಈ ಆಂದೋಲನ ನಡೆಸುತ್ತಿದ್ದೇವೆ ಎಂದ್ರು.

'ಇವಿಎಂ ತೊಲಗಿಸಿ' ಅಂಚೆ ಪತ್ರ ಆಂದೋಲನ

ಈ ನಮ್ಮ ಬೇಡಿಕೆಗೆ ಚುನಾವಣಾ ಆಯುಕ್ತರು, ಕೇಂದ್ರ ಸರ್ಕಾರ ಶೀಘ್ರವಾಗಿ ಸ್ಪಂದಿಸುವ ಮುಖಾಂತರ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇವಿಎಂ ಮೂಲಕ ಸುಲಭದಲ್ಲಿ ಮತಗಳನ್ನು ಹ್ಯಾಕ್ ಮಾಡಬಹುದು. ಮುಂದುವರಿದ ರಾಷ್ಟ್ರವಾದ ಅಮೆರಿಕ ಕೂಡ ಚುನಾವಣೆಗೆ ಇವಿಎಂ ಬಳಸದೆ ಬ್ಯಾಲೆಟ್​ ಪೇಪರ್​ ಅವಲಂಬಿಸಿದೆ. ಆದ್ದರಿಂದ ಭಾರತದಲ್ಲಿ ಸೂಕ್ತ ಅಭ್ಯರ್ಥಿ ಚುನಾವಣೆಯಲ್ಲಿ ಜಯ ಕಾಣಬೇಕಾದರೆ ಬ್ಯಾಲೆಟ್​ ಪೇಪರ್​ ಸೂಕ್ತ ಮಾರ್ಗ ಎಂದು ಪಿಂಟೊ ಹೇಳಿದ್ರು.

Intro:ಮಂಗಳೂರು: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ 'ಇವಿಎಂ ತೊಲಗಿಸಿ, ಮತಪತ್ರ ಬಳಸಿ' ಆಂದೋಲನವು ಇಂದು ನಗರದ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗ ನಡೆಯಿತು.

ಈ ಸಂದರ್ಭ ಮಹಿಳಾ ಕಾಂಗ್ರೆಸ್ ನ ಸದಸ್ಯೆಯರು
ಇವಿಎಂ ತೊಲಗಿಸಬೇಕೆಂದು ರಾಷ್ಟ್ರಪತಿಗಳಿಗೆ ಅಂಚೆ ಪತ್ರಗಳನ್ನು‌ ಬರೆದು ಪೋಸ್ಟ್‌ ಬಾಕ್ಸ್ ಮುಖಾಂತರ ರಾಷ್ಟ್ರಪತಿ ಭವನಕ್ಕೆ ರವಾನಿಸಿದರು.

Body:ಈ ಸಂದರ್ಭ ದ.ಕ‌.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ, ದ.ಕ‌.ಜಿಲ್ಲಾ ಮಹಿಳಾ ಕಾಂಗ್ರೆಸ್ ನ ವತಿಯಿಂದ ಇವಿಎಂನ್ನು ತೊಲಗಿಸಿ, ಮತಪತ್ರದ ಮುಖಾಂತರವೇ ಚುನಾವಣೆ ನಡೆಸಬೇಕೆಂದು ರಾಷ್ಟ್ರಪತಿಗಳಿಗೆ ನಮ್ಮ ಬೇಡಿಕೆಗಳನ್ನು ಅಂಚೆ ಪತ್ರಗಳ ಮುಖಾಂತರ ಬರೆದು ರಾಷ್ಟ್ರಪತಿ ಭವನಕ್ಕೆ ಪೋಸ್ಟ್ ಮಾಡುತ್ತಿದ್ದೇವೆ. ಇಂದು ಏಕಕಾಲದಲ್ಲಿ ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 1ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್ ಗಳನ್ನು ರಾಷ್ಟಪತಿ ಭವನಕ್ಕೆ ಪೋಸ್ಟ್‌ ಮಾಡುತ್ತಿದ್ದೇವೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೊದಲಿನಿಂದ ಇರುವ ಮತಪತ್ರಗಳ ಚುನಾವಣೆಯೇ ಇರಲಿ ಎಂದು ಈ ಆಂದೋಲನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ನಮ್ಮ ಬೇಡಿಕೆಗೆ ಚುನಾವಣಾ ಆಯುಕ್ತರು, ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸುವ ಮುಖಾಂತರ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇವಿಎಂ ಮೂಲಕ ಬಹಳಷ್ಟು ಸುಲಭದಲ್ಲಿ ಮತಗಳನ್ನು ಹ್ಯಾಕ್ ಮಾಡಬಹುದು. ಮುಂದುವರಿದ ರಾಷ್ಟ್ರವಾದ ಅಮೇರಿಕಾ ಕೂಡ ಚುನಾವಣೆಗೆ ಇವಿಎಂ ಬಳಸದೆ ಮತಪತ್ರಗಳನ್ನು ಅವಲಂಬಿಸಿದೆ. ಆದ್ದರಿಂದ ಭಾರತದಲ್ಲಿ ಸೂಕ್ತ ಅಭ್ಯರ್ಥಿ ಚುನಾವಣೆಯಲ್ಲಿ ಜಯ ಕಾಣಬೇಕಾದರೆ ಮತಪತ್ರವೇ ಸೂಕ್ತ ಮಾರ್ಗ ಎಂದು ಶಾಲೆಟ್ ಪಿಂಟೊ ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.