ಕಡಬ : ನಗರದ ಮುಖ್ಯಪೇಟೆ ವ್ಯಾಪ್ತಿ ಸೇರಿ ತಾಲೂಕಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಲಕ್ಷಗಟ್ಟಲೆ ಸಾರ್ವಜನಿಕ ಹಣ ಉಪಯೋಗಿಸಿ ಹಾಕಿದ ಬೀದಿ ದೀಪಗಳು ಸರಿಯಾದ ರೀತಿ ನಿರ್ವಹಣೆ ನಡೆಯದ ಕಾರಣ ರಾತ್ರಿಯಾದ್ರೆ ಕಡಬ ಪೇಟೆಯಲ್ಲಿ ಓಡಾಡಲು ಹೆದರಬೇಕಾದ ಸ್ಧಿತಿ ನಿರ್ಮಾಣವಾಗಿತ್ತು.
ಕಡಬದ ಮುಖ್ಯಪೇಟೆ ವ್ಯಾಪ್ತಿ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಲಕ್ಷಗಟ್ಟಲೆ ಸಾರ್ವಜನಿಕ ಹಣ ಉಪಯೋಗಿಸಿ ಹಾಕಿದ ಬೀದಿ ದೀಪಗಳು ಸರಿಯಾದ ರೀತಿ ನಿರ್ವಹಣೆ ನಡೆಯದ ಕಾರಣ ರಾತ್ರಿಯಾದ್ರೆ ಕಡಬ ಪೇಟೆಯಲ್ಲಿ ಓಡಾಡುದಕ್ಕೂ ಹೆದರಬೇಕಾದ ಸ್ಧಿತಿ ನಿರ್ಮಾಣವಾಗಿದ್ದರ ಕುರಿತು ಈಟಿವಿ ಭಾರತ ಶುಕ್ರವಾರ ವರದಿ ಬಿತ್ತರ ಮಾಡಿತ್ತು.
ಇದರಿಂದ ಎಚ್ಚೆತ್ತ ಅಧಿಕಾರಿಗಳು ಒಂದೇ ದಿನದಲ್ಲಿ ಕಡಬ ಪೇಟೆಯಲ್ಲಿನ ಬೀದಿ ದೀಪಗಳನ್ನು ಸರಿಪಡಿಸಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.