ETV Bharat / state

ಮಾಸ್ಕ್ ಧಾರಣೆಯ ಒತ್ತಡ ನಿವಾರಣೆಗೆ ಪರಿಸರ ಸ್ನೇಹಿ ಇನ್ವಿ ಇಯರ್ ಸೇವರ್...!

ಕೊರೊನಾ ವೈರಸ್​​ ತಂದೊಡ್ಡಿದ ಸಂಕಷ್ಟದಿಂದಾಗಿ ಪ್ರತಿಯೊಬ್ಬರೂ ಮಾಸ್ಕ್​ ಬಳಸುವುದು ಕಡ್ಡಾಯವಾಗಿದ್ದು, ಈ ಮಾಸ್ಕ್​​ ಧರಿಸುವುದರಿಂದ ಕೆಲ ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ಮಾಸ್ಕ್​ಗೆ ಹೊಂದಿಕೊಳ್ಳುವಂತೆ ಇನ್ವಿ ಇಯರ್ ಸೇವರ್ ಎಂಬ ಸಾಧನವನ್ನು ಕಂಡು ಹಿಡಿಯಲಾಗಿದ್ದು, ಇದರಿಂದಾಗಿ ಸ್ವಲ್ಪ ಮಟ್ಟಿನ ರಿಲೀಫ್​ ಸಿಗೋದು ಖಚಿತವಾಗಿದೆ.

author img

By

Published : May 19, 2020, 5:45 PM IST

Invi Ear Saver
ಇನ್ವಿ ಇಯರ್ ಸೇವರ್

ಮಂಗಳೂರು: ಕೋವಿಡ್-19 ಸೋಂಕು ಭೀತಿಯಿಂದ ಎಲ್ಲರೂ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಸರ್ಜಿಕಲ್ ಮಾಸ್ಕ್, ಎನ್95 ಮಾಸ್ಕ್ ಗಳನ್ನು ಗಂಟೆಗಟ್ಟಲೆ ಧರಿಸುವ ಪರಿಣಾಮ ಅದರ ಎಲಾಸ್ಟಿಕ್ ನಿಂದ ಕಿವಿ ಸುತ್ತ ನೋವು, ಒತ್ತಡವನ್ನು ಸಹಿಸೋದೇ ಇದೀಗ ಎಲ್ಲರಿಗೆ ದುಸ್ತರವಾಗಿದೆ. ಅದಕ್ಕಾಗಿ ಇಂಜಿನಿಯರಿಂಗ್ ಪ್ರಾಧ್ಯಾಪಕರೊಬ್ಬರು ಪರಿಸರ ಸ್ನೇಹಿ ಇನ್ವಿ ಇಯರ್ ಸೇವರ್ ಸಾಧನವನ್ನು ಆವಿಷ್ಕರಿಸಿದ್ದಾರೆ.

ಕೊರೋನಾ ವಾರಿಯರ್ಸ್ ಗಳು ಕಡ್ಡಾಯವಾಗಿ ಎನ್ 95, ಸರ್ಜಿಕಲ್ ಮಾಸ್ಕ್ ಗಳನ್ನು ಬಳಸಲೇ ಬೇಕಾಗುತ್ತದೆ‌. ಕನಿಷ್ಠ 8 ಗಂಟೆಗಳ ಕಾಲ ಈ ಮಾಸ್ಕ್ ಗಳನ್ನು ಬಳಸಿದ್ದಲ್ಲಿ ಅದರ ಎಲಾಸ್ಟಿಕ್ ನಿಂದ ಕಿವಿ ಸುತ್ತ ಕೆಂಪಾಗುವುದು, ನೋವಾಗುವುದಂತೂ ಖಚಿತ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಇನ್ವಿ ಇಯರ್ ಸೇವರ್ ಸಾಧನವನ್ನು ಎಲೆಸ್ಟಿಕ್ ಗೆ ಸಿಕ್ಕಿಸಿ ಧರಿಸಿದಲ್ಲಿ ಯಾವ ಒತ್ತಡವೂ ಇಲ್ಲದೇ ಆರಾಮವಾಗಿ ಇರಬಹುದು. ಅಲ್ಲದೇ ಇನ್ನಿತರ ಸುದೀರ್ಘ ಅವಧಿಯವರೆಗೆ ಮಾಸ್ಕ್ ಗಳನ್ನು ಧರಿಸುವವರಿಗೂ ಈ ಸಾಧನ ಉಪಯುಕ್ತವಾಗಿದೆ.

ಮಾಸ್ಕ್ ಗಳ ನಿಗದಿತ ಅಳತೆಯನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಆದರೆ, ಎಲ್ಲರ ಮುಖಗಳ ಅಳತೆಗಳಲ್ಲಿ ವ್ಯತ್ಯಾಸ ಇರುವುದಂತೂ ಖಂಡಿತ. ಅಗಲ, ದೊಡ್ಡ ಮುಖದವರಿಗೆ ಖಂಡಿತಾ ಮಾಸ್ಕ್ ಗಳನ್ನು ಧರಿಸುವುದರಿಂದ ನೋವು, ಒತ್ತಡ, ಕಿವಿಸುತ್ತ ಕೆಂಪು ಮಾರ್ಕ್ ಗಳು ಬೀಳುತ್ತವೆ. ಅದಕ್ಕಾಗಿಯೇ ಮೂಡುಬಿದಿರೆಯ ಯೆನಪೊಯ ಇನ್​​​​​​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಶಾಂಕ್ ಎಂ. ಗೌಡ ಹಾಗೂ ಅವರ ಸಹೋದರ ಇನ್ವಿಹಬ್ ಟೆಕ್ನೋಸೊಲ್ಯೂಷನ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ನಿಖಿಲ್ ಗೌಡ ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಇನ್ವಿ ಇಯರ್ ಸೇವರ್ ಅನ್ನು ಜೋಳ, ಕಬ್ಬು ಮುಂತಾದ ಸಸ್ಯಗಳ ಪಿಷ್ಟದಿಂದ ಸಂಸ್ಕರಿಸಲಾಗಿದ್ದು, ಪಿಎಲ್ಎ ತಂತುವಿನಂತೆ ಮಾಡಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಮುದ್ರಿಸಲಾಗುತ್ತದೆ. ಈ ಪಿಎಲ್ಎ(ಪಾಲಿಲ್ಯಾಕ್ಟೈಡ್) ನವೀಕರಿಸಬಹುದಾದ ಥರ್ಮೋಪ್ಲಾಸ್ಟಿಕ್ ಪಾಲಿಮರ್ ಆಗಿದೆ. ಆದ್ದರಿಂದ ಇದು ಪರಿಸರಕ್ಕೆ ಮಾರಕವಲ್ಲದ ಸಾಧನವೂ ಹೌದು.

ಈ ಬಗ್ಗೆ ಶಶಾಂಕ್ ಎಂ. ಗೌಡ ಈಟಿವಿ ಭಾರತದೊಂದಿಗೆ ಮಾತನಾಡಿ, ಇನ್ವಿ ಇಯರ್ ಸೇವರ್ ಸಾಧನದಲ್ಲಿ ವಿವಿಧ ರೀತಿಯ ಕೊಕ್ಕೆಗಳು ಇದ್ದು, ಈ ಮೂಲಕ ಮಾಸ್ಕ್ ಗಳನ್ನು ತಮಗೆ ಬೇಕಾದ ಅಳತೆಗಳಲ್ಲಿ ಸಿಕ್ಕಿಸಿ ಬಳಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಯಾವುದೇ ಒತ್ತಡ, ನೋವು ಇಲ್ಲದೇ ಆರಾಮವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ ಮೂಡುಬಿದಿರೆ, ಬೆಂಗಳೂರಿನಿಂದ ಬೇಡಿಕೆ ಇದ್ದು, ಇಂದು ಮಂಗಳೂರಿನಿಂದಲೂ ಬೇಡಿಕೆ ಬಂದಿದೆ ಎಂದು ಹೇಳಿದರು.

ಈ ಹಿಂದೆ ಕೊರೊನಾ ಸೋಂಕು ಹರಡದಂತೆ ತಡೆಯಲು ಫೇಸ್ ಶೀಲ್ಡ್ ಮಾಸ್ಕ್ ಹಾಗೂ ಹೈಜಿ ಹ್ಯಾಂಡ್ ಗಳನ್ನು ಆವಿಷ್ಕಾರಗೊಳಿಸಿರುವ ಶಶಾಂಕ್ ಅವರ ತಂಡ ಇದೀಗ ಪರಿಸರ ಸ್ನೇಹಿ ಇನ್ವಿ ಇಯರ್ ಸೇವರ್ ಸಾಧನವನ್ನು ಅಭಿವೃದ್ಧಿ ಪಡಿಸಿದೆ. ಇನ್ವಿ ಇಯರ್ ಸೇವರ್ ಬೇಕಾದವರು ಶಶಾಂಕ್ ಎಂ. ಗೌಡ (9036524934) ಅವರನ್ನು ಸಂಪರ್ಕಿಸಬಹುದು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.