ETV Bharat / technology

ಜನ್​ ಧನ್​ ಯೋಜನೆ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನಗಳ ಮಾರಾಟ - Two Wheeler Sales Increase In Rural

Two Wheeler Sales Increasing: ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚುತ್ತಿದೆ. ದೇಶದ ಗ್ರಾಮಿಣ ಭಾಗದಲ್ಲಿ ಶೇ.22ರಷ್ಟು ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

author img

By ETV Bharat Tech Team

Published : 2 hours ago

TWO WHEELER INDUSTRY  BNP PARIBAS INDIA  TWO WHEELER SALES  TWO WHEELER SALES IN INDIA
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನಗಳ ಮಾರಾಟ (IANS)

Two Wheeler Sales Increasing In Rural: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಬಳಕೆಯಿಂದಾಗಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಬಳಕೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಈ ಸೆಪ್ಟೆಂಬರ್​ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22ರಷ್ಟು ಮತ್ತು ತ್ರಿಚಕ್ರ ವಾಹದಲ್ಲಿ ಸುಮಾರು ಶೇ.8ರಷ್ಟು ಏರಿಕೆ ಕಂಡಿದೆ ಎಂದು ಬಿಎನ್​ಪಿ ಪರಿಬಾಸ್​ ಇಂಡಿಯಾ (BNP Paribas India) ವರದಿ ಮಾಡಿದೆ.

ಇನ್ನು ಇದು ರಿಟೈಲ್​ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಹಬ್ಬದ ಋತುವಿನಲ್ಲಿ ಇನ್ನಷ್ಟು ಹೆಚ್ಚು ಮಾರಾಟವಾಗಬಹುದೆಂದು ಒರಿಜಿನಲ್​ ಎಕ್ಯುಪ್ಮೆಂಟ್​ ಮ್ಯಾನುಫ್ಯಾಕ್ಟರ್ಸ್ (OEMs) ಭರವಸೆ ಇಟ್ಟುಕೊಂಡಿದ್ದಾರೆ. ಇನ್ನು ಟ್ರ್ಯಾಕ್ಟರ್​ ಮಾರಾಟಗಳಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರ ಬೆಳವಣಿಗೆ ಕಂಡು ಬಂದಿದೆ. ಆದರೆ, ಆರ್ಥಿಕ ವರ್ಷ 2025ರಲ್ಲಿ ಈ ಬೆಳವಣಿಗೆ ಏರಳಿತ ಕಾಣಬಹುದೆಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ಯಾಸೆಂಜರ್​ ವಾಹನಗಳ ಮಾರಾಟವೂ ಸಮತಟ್ಟವಾಗಿದೆ. ರಿಟೈಲ್​ ಮಾರಾಟಗಳಲ್ಲಿ ಪಿವಿ ಒಇಎಮ್​ಗಳು ಪ್ಯಾಸೆಂಜರ್​ ವಾಹನಗಳ ರವಾನೆಯನ್ನು ಕಡಿತಗೊಳಿಸಿವೆ. ಅಷ್ಟೇ ಅಲ್ಲ ಈ ಹಬ್ಬದ ಋತುವಿನಲ್ಲಿ ದಾಸ್ತಾನು ಸಂಗ್ರಹ ಕಂಡು ಬಂದಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ.

ಗ್ರಾಮೀಣ ಭಾಗದಲ್ಲಿ ದ್ವಿಚಕ್ರವಾಹನಗಳ ಬಳಕೆಯಲ್ಲಿ ಹೆಚ್ಚಳ: ಪ್ರಧಾನ್​ ಮಂತ್ರಿ ಜನ್​ ಧನ್​ ಯೋಜನೆ (PMJDY)ಯಿಂದಾಗಿ ಗ್ರಾಮೀಣ ಮತ್ತು ನಗರ ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚುತ್ತಿದೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಲೋನ್​ ಪಡೆದು ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನವನ್ನು ಶೇ. 62ರಷ್ಟು ಮತ್ತು ನಗರ ಭಾಗದಲ್ಲಿ ಶೇಕಡ 58ರಷ್ಟು ಖರೀದಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

53 ಕೋಟಿ ಜನ್​ಧನ್​ ಯೋಜನೆ ಖಾತೆ: ಪ್ರಧಾನ್​ ಮಂತ್ರಿ ಜನ್​ ಧನ್​ ಯೋಜನೆ ಅಡಿ 53 ಕೋಟಿಗೂ ಹೆಚ್ಚು ಜನರು ಬ್ಯಾಂಕ್​ ಖಾತೆಗಳನ್ನು ಹೊಂದಿದ್ದಾರೆ. ಈ ಮೂಲಕ ಲಕ್ಷಾಂತರ ಗ್ರಾಮೀಣ ಭಾಗದ ಜನರನ್ನು ಮೊದಲ ಬಾರಿಗೆ ಔಪಚಾರಿಕವಾಗಿ ಹಣಕಾಸು ವ್ಯವಸ್ಥೆಗೆ ತಂದಂತಾಗಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ವೇಗದಿಂದ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 5 ಲಕ್ಷಕ್ಕಿಂತ ಆದಾಯ ಹೆಚ್ಚು ಇರುವವರು ಸುಮಾರು ಶೇಕಡ 60ರಷ್ಟು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ಬಹಿರಂಗ ಪಡಿಸಿತ್ತು.

ಈ ಸೆಪ್ಟೆಂಬರ್​ ತಿಂಗಳಲ್ಲಿ ಎಲೆಕ್ಟ್ರಿಕ್​ ವಾಹನಗಳ ನೋಂದಣಿ 1.59 ಲಕ್ಷ ಯುನಿಟ್​ಗೆ ತಲುಪಿದೆ. ಆದರೆ ಕಳೆದ ವರ್ಷ ಇದೇ ತಿಂಗಳಿಗೆ 1.29 ಲಕ್ಷ ಯುನಿಟ್​ಗೆ ತಲುಪಿತ್ತು. ಡೇಟಾಗಳ ಪ್ರಕಾರ ಇವಿ ವಾಹನಗಳ ಮಾರಾಟವು 0.90 ಲಕ್ಷ ಯುನಿಟ್​ಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 0.64 ಲಕ್ಷ ಯುನಿಟ್​ ಮಾರಾಟ ಕಂಡಿತ್ತು. ಇನ್ನು ಇವಿ ತ್ರಿಚಕ್ರ ಮಾರಾಟದಲ್ಲಿ ಕೊಂಚ ಏರಿಕೆ ಕಂಡಿದೆ. ಈ ವರ್ಷ 0.63 ಲಕ್ಷ ಯುನಿಟ್​ ಮಾರಾಟವಾಗಿದ್ದು, ಕಳೆದ ವರ್ಷ 0.58 ಲಕ್ಷ ಯುನಿಟ್​ ಮಾರಾಟವಾಗಿದೆ.

ಓದಿ: ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಅಭಿವೃದ್ಧಿಗೆ ಹೆಚ್ಚುವರಿಯಾಗಿ 500 ಮಿಲಿಯನ್​ ಡಾಲರ್​ ಹೂಡಿಕೆ ಮಾಡಿದ ಟೊಯೊಟಾ! - Electric Air Taxis

ETV Bharat Logo

Copyright © 2024 Ushodaya Enterprises Pvt. Ltd., All Rights Reserved.