ETV Bharat / state

ದೀಪಾವಳಿಗೆ ಸಿದ್ಧಗೊಂಡಿವೆ ಪರಿಸರ ಸ್ನೇಹಿ ಪಟಾಕಿಗಳು: ಮಂಗಳೂರಿನ ನಿತಿನ್​ ವಾಸ್​ರಿಂದ ತಯಾರಿ - ಪರಿಸರ ಸ್ನೇಹಿ ಪಟಾಕಿ

ಇನ್ನೇನು ಕೆಲವೇ ದಿನಗಳಲ್ಲಿ ದೀಪಗಳ ಹಬ್ಬ ದೀಪಾವಳಿ ಶುರುವಾಗುತ್ತದೆ. ದೀಪಾವಳಿ ಬಂತೆಂದರೆ ದೀಪಗಳ ಬೆಳಗುವಿಕೆಯ ಜೊತೆಗೆ ಪಟಾಕಿಗಳ ಅಬ್ಬರವು ಇರುತ್ತದೆ. ಹೀಗಾಗಿ ಮಂಗಳೂರಿನ ಪರಿಸರ ಪ್ರೇಮಿ ಕಲಾವಿದರೊಬ್ಬರು ಪರಿಸರ ಸ್ನೇಹಿ ಪಟಾಕಿ ತಯಾರಿಸುತ್ತಿದ್ದಾರೆ.

Eco friendly crackers are ready for Deepavali
ದೀಪಾವಳಿಗೆ ಸಿದ್ಧಗೊಂಡಿವೆ ಪರಿಸರ ಸ್ನೇಹಿ ಪಟಾಕಿಗಳು
author img

By

Published : Oct 11, 2022, 6:22 PM IST

ಮಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ದೀಪಾವಳಿಗೆ ಈಗಾಗಲೇ ಸುಡುಮದ್ದು ತಯಾರಿಕಾ ಕಂಪನಿಗಳು ನಾನಾ ಬಗೆಯ ಪಟಾಕಿಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಡುವ ಉತ್ಸಾಹದಲ್ಲಿವೆ. ಸದ್ದು ಮಾಡುವ, ಪರಿಸರಕ್ಕೆ ಮಾರಕವಾಗಿರುವ ಪಟಾಕಿಗಳ ಬದಲಿಗೆ ಸದ್ದೇ ಮಾಡದೆ, ಸಿಡಿಯದ ಪಟಾಕಿಗಳ ತಯಾರಿಕೆಗೆ ಮಂಗಳೂರಿನ ಪರಿಸರ ಪ್ರೇಮಿ ಕಲಾವಿದ ನಿತಿನ್ ವಾಸ್ ಅವರ ತಂಡ ಕಾರ್ಯನಿರ್ವಹಿಸುತ್ತಿದೆ.

ದೀಪಾವಳಿಗೆ ಸಿದ್ಧಗೊಂಡಿವೆ ಪರಿಸರ ಸ್ನೇಹಿ ಪಟಾಕಿಗಳು

ಪರಿಸರ ಸ್ನೇಹಿ ಪಟಾಕಿಗಳ ತಯಾರಿ: ಮಂಗಳೂರಿನ ಪಕ್ಷಿಕೆರೆಯಲ್ಲಿರುವ ಪೇಪರ್ ಸೀಡ್ಸ್ ಸಂಸ್ಥೆ ಮೂಲಕ ಈ ಬಾರಿಯ ದೀಪಾವಳಿಗೆ ಪರಿಸರ ಸ್ನೇಹಿ ಪಟಾಕಿಗಳ ತಯಾರಿ ಭರದಿಂದ ನಡೆಯುತ್ತಿದೆ. ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಪಟಾಕಿಗಳ ತಯಾರಿ ನಡೆಯುತ್ತಿದೆ. ಪಟಾಕಿಗಳಂತೆ ಕಾಣುವ ಇವುಗಳು ಸಿಡಿಯುವುದಿಲ್ಲ.

ಪಟಾಕಿಯಿಂದ ಬೆಳೆಯುವ ಗಿಡಗಳು: ಈ ಸಿಡಿಯದ ಪಟಾಕಿಗಳನ್ನು ನೈಜ ಪಟಾಕಿಗಳ ರೀತಿಯಲ್ಲಿ ತಯಾರಿಸಲಾಗಿದೆ. ಅದರ ಬಣ್ಣ, ಗಾತ್ರ ಇವುಗಳೆಲ್ಲ ನಿಜವಾದ ಪಟಾಕಿ ರೀತಿಯಲ್ಲಿ ಇದೆ.ಈ ಪಟಾಕಿಗಳು ಸಿಡಿಸುವ ಬದಲು ತೊಟ್ಟಿ, ಹೂ ಕುಂಡಗಳಿಗೆ ಹಾಕಿದರೆ, ಅವು ಗಿಡವಾಗಿ ಬೆಳೆಯುತ್ತವೆ. ಪೇಪರ್ ಸೀಡ್ಸ್ ಸಂಸ್ಥೆಯಿಂದ ತಯಾರಿಸಲಾದ ಪಟಾಕಿಗಳಲ್ಲಿ ವಿವಿಧ ತರಕಾರಿ ಬೀಜಗಳನ್ನು ಹಾಕಲಾಗಿದೆ‌. ಈ ಪಟಾಕಿಗಳ ಒಳಗಡೆ ಹಾಕಿರುವ ಬೀಜಗಳು ಮಣ್ಣಿಗೆ ಬಿದ್ದು, ಅದಕ್ಕೆ ನೀರು ಹಾಕಿದರೆ ಮೊಳಕೆಯೊಡೆದು ಗಿಡವಾಗಿ ಬೆಳೆಯಲಿದೆ.

Eco friendly crackers are ready for Deepavali
ದೀಪಾವಳಿಗೆ ಸಿದ್ಧಗೊಂಡಿವೆ ಪರಿಸರ ಸ್ನೇಹಿ ಪಟಾಕಿಗಳು

ಪಟಾಕಿಯಲ್ಲಿವೆ ತರಕಾರಿ ಬೀಜಗಳು: ಬೀಡಿ ಪಟಾಕಿಯಲ್ಲಿ ಮೆಣಸು, ಟೊಮೆಟೊ, ಪಾಲಕ್, ಲಕ್ಷ್ಮೀ ಬಾಂಬ್​ನಲ್ಲಿ ಬೀಟ್ರೋಟ್, ಸನ್ ಫ್ಲವರ್ ಸೌತೆಕಾಯಿ, ಸುಕ್ಲಿ ಬಾಂಬ್​ನಲ್ಲಿ ಮೆಣಸಿನಕಾಯಿ ಟೊಮೆಟೊ, ಮೂಲಂಗಿ, ರಾಕೆಟ್​ನಲ್ಲಿ ಬೀಟ್ರೋಟ್ , ಸನ್ ಫ್ಲವರ್, ದುರ್ಸುನಲ್ಲಿ ಕುಕ್ಕುಂಬರ್, ಲೇಡಿಸ್ ಫಿಂಗರ್, ನೆಲಚಕ್ರದಲ್ಲಿ ಪಾಲಕ್​, ಮೂಲಂಗಿ ಬೀಜಗಳನ್ನು ಹಾಕಲಾಗಿದೆ. ಇವುಗಳು ಮಣ್ಣಿಗೆ ಹಾಕಿ, ನೀರು ಹಾಕಿದರೆ ಗಿಡವಾಗುತ್ತವೆ.

30 ಜನರಿಂದ ಪಟಾಕಿಗಳ ತಯಾರಿ: ಈ ಪಟಾಕಿಗಳನ್ನು ಹೂಕುಂಡದಲ್ಲಿ ಹಾಕಿದ್ರೆ, ಅವು ಗಿಡವಾಗಿ ಬೆಳೆಯುತ್ತವೆಯೇ ಎಂಬುದನ್ನು ಸಹ ಪರೀಕ್ಷಿಸಲಾಗಿದೆ. ಎಲ್ಲಾ ಪಟಾಕಿಗಳಲ್ಲಿರುವ ಬೀಜಗಳಿಂದ ಗಿಡಗಳು ಬೆಳೆದಿವೆ. ಈ ಪರಿಸರ ಸ್ನೇಹಿ ಪಟಾಕಿಗಳನ್ನು ಸುಮಾರು 30 ಮಂದಿ ತಯಾರಿಸುತ್ತಿದ್ದಾರೆ. ಈ ಮೂಲಕ ಅಷ್ಟು ಮಂದಿಗೆ ಉದ್ಯೋಗವು ಸಿಕ್ಕಿದೆ. ಈ ಆರು ಬಗೆಯ ಪರಿಸರ ಸ್ನೇಹಿ ಪಟಾಕಿಗಳನ್ನು ಒಂದು ಬಾಕ್ಸ್​​ನಲ್ಲಿ ಹಾಕಿ ಮಾರಾಟಕ್ಕೆ ತಯಾರು ಮಾಡಲಾಗುತ್ತಿದೆ.

ಪರಿಸರ ಪ್ರೇಮಿ ಕಲಾವಿದ ನಿತಿನ್ ವಾಸ್ ಅವರು ಮಾತನಾಡಿ, ಹಬ್ಬದ ಸಮಯಕ್ಕೆ ಪೂರಕವಾಗಿ ಮಾಡಿದ್ದೇವೆ. ಈ ಪರಿಸರ ಸ್ನೇಹಿ ಪಟಾಕಿಗಳನ್ನು ಮನೆಯಲ್ಲಿ ತಯಾರಿಸಿ ಅದನ್ನು ಪೇಪರ್ ಸೀಡ್ಸ್ ಸಂಸ್ಥೆ ಗೆ ತಂದು ಸರಿಯಾಗಿ ಜೋಡಿಸಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಜನರಿಗೆ ತಲುಪಿಸಲು ಯತ್ನಿಸುತ್ತಿದ್ದೇವೆ. ನಮ್ಮ ಜೊತೆಗೆ ಈಗಾಗಲೇ ಕೈಜೋಡಿಸಿರುವ ಎನ್​ಜಿಒ, ಪರಿಸರ ಪ್ರೇಮಿಗಳು ಇದನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿಪಕ್ಷಿಗಳ ಆಗಮನ

ಪೇಪರ್ ಸೀಡ್ಸ್ ಸಂಸ್ಥೆಯ ಸಿಇಒ ರೀನಾ ಮಾತನಾಡಿ, ಹಲವು ಮಂದಿ ಇಂತಹ ಸುಡದೇ ಇರುವ ಪಟಾಕಿಗಳನ್ನು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಪಟಾಕಿಗಳನ್ನು ತಯಾರು ಮಾಡಲಾಗಿದೆ. ಈ ಪರಿಸರ ಸ್ನೇಹಿ ಪಟಾಕಿಗಳು ನೋಡಲು ಪಟಾಕಿಗಳಂತೆ ಕಾಣುತ್ತವೆಯಾದರು ಪಟಾಕಿಯಂತೆ ಸಿಡಿಯಲ್ಲ, ಶಬ್ದ ಮಾಡಲ್ಲ, ಬೆಳಕು ನೀಡಲ್ಲ. ಆದರೆ, ಇದು ಗಿಡವಾಗಿ ಬೆಳೆಯುತ್ತದೆ. ಹಲವು ಪರಿಸಾರಸಕ್ತರು ಇಂತಹ ಪಟಾಕಿಗಳನ್ನು ನಿರೀಕ್ಷಿಸುತ್ತಿದ್ದು, ಪೇಪರ್ ಸೀಡ್ಸ್ ಸಂಸ್ಥೆ ಈ ಹೊಸ ಪ್ರಯೋಗ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.