ಮಂಗಳೂರು: ಮಂಗಳೂರು ಹಿಂಸಾಚಾರದ ವೇಳೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ಎಂಬ ನಕಲಿ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನೈಜ ದಾಖಲೆಯಲ್ಲ, ನಕಲಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ ಪಿ.ಎಸ್ ಹರ್ಷ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 19ರಂದು ನಡೆದ ಗಲಭೆ ಮತ್ತು ಅದರ ನಂತರ ಕರ್ತವ್ಯದ ವೇಳೆ ಪೊಲೀಸರು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಒಟ್ಟು 10 ಲಕ್ಷ ಬಹುಮಾನ ನೀಡಿರುವುದಾಗಿ ಮಂಗಳೂರು ನಗರ ಪೊಲೀಸ್ ಆದೇಶದಂತೆ ಪ್ರಕಟಣೆಯನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಮಂಗಳೂರಿನ ಎರಡು ಡಿಸಿಪಿಗಳು ಸೇರಿದಂತೆ 148 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬಹುಮಾನವನ್ನು ಹಂಚಲಾಗಿದೆ ಎಂದು ಕಮಿಷನರ್ ಹೆಸರಿನಲ್ಲಿ ಆದೇಶ ಹೊರಡಿಸಿದಂತೆ ಪತ್ರ ಸೃಷ್ಟಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್ ಹರ್ಷ ಅವರು ಅದು ನಕಲಿ ಪತ್ರವಾಗಿದೆ ಎಂದು ಹೇಳಿದ್ದಾರೆ.