ETV Bharat / state

ಕುಟುಂಬ, ಮನೆ ನಿರ್ವಹಿಸಬೇಕಾದರೆ ಮಹಿಳೆಯರಿಗೆ ಜಾಗೃತಿ ಅಗತ್ಯ: ಕೋಟ ಶ್ರೀನಿವಾಸ ಪೂಜಾರಿ - ಮಂಗಳೂರು ಸುದ್ದಿ

ಪ್ರತೀ ಮನೆಗಳು, ಕುಟುಂಬಗಳು ತನ್ನದೇ ಆದ ಚೌಕಟ್ಟಿನಲ್ಲಿ, ಶಕ್ತಿಯುತವಾಗಿ ಬೆಳೆಯಬೇಕಾದರೆ ಮಹಿಳೆಯರು ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು‌ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

district-femin-power-conference-at-mangalore

author img

By

Published : Feb 13, 2020, 3:19 AM IST

Updated : Feb 13, 2020, 3:29 AM IST

ಮಂಗಳೂರು: ಸಮಾಜವನ್ನು ಕಟ್ಟಿ ಬೆಳೆಸುವ, ದಾರಿದೀಪವಾಗುವ, ಕುಟುಂಬವನ್ನು ನಿರ್ವಹಣೆ ಮಾಡಬೇಕಾದರೆ ಮಹಿಳಾ ಶಕ್ತಿ ಅತ್ಯಂತ ಯೋಜನಾಬದ್ಧವಾಗಿ ಕೆಲಸ ಮಾಡಬೇಕು. ಪ್ರತೀ ಮನೆಗಳು, ಕುಟುಂಬಗಳು ತನ್ನದೇ ಆದ ಚೌಕಟ್ಟಿನಲ್ಲಿ, ಶಕ್ತಿಯುತವಾಗಿ ಬೆಳೆಯಬೇಕಾದರೆ ಮಹಿಳೆಯರು ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು‌ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದೊಂದಿಗೆ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾಮಟ್ಟದ ಸ್ತ್ರೀಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದಷ್ಟು ಯೋಜನೆಗಳನ್ನು ಮಹಿಳಾ ಸಬಲೀಕರಣ, ಜಾಗೃತಿಗೋಸ್ಕರ ಜಾರಿಗೆ ತರಬೇಕಾಗಿದೆ. ಕೇಂದ್ರ ಸರಕಾರದ ಭೇಟಿ ಬಜಾವೋ, ಭೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ರಾಜ್ಯ ಸರಕಾರವೂ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾಮಟ್ಟದ ಸ್ತ್ರೀಶಕ್ತಿ ಸಮಾವೇಶ

ಹಿಂದೆ ಹೆಣ್ಣು ಮಕ್ಕಳು ಹುಟ್ಟಿದಾಗ ತುಂಬಾ ತಾತ್ಸರದಿಂದ ಕಾಣುವ ಕಾಲವಿತ್ತು. ಹೆಣ್ಣು ಮಗು ಹುಟ್ಟಿದಾಗ ಭ್ರೂಣ ಹತ್ಯೆ ಮಾಡೋದು, ಆಸ್ಪತ್ರೆಯಲ್ಲಿಯೇ ಮಗುವನ್ನು ಬಿಟ್ಟು ಹೋಗುವ ನಿದರ್ಶನಗಳಿತ್ತು. ಈ ಕಾರಣದಿಂದ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಹೆಣ್ಣುಮಕ್ಕಳ ಇಡೀ ಬದಕನ್ನು ನೋಡುವಂತಹ ಕೆಲಸವನ್ನು ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಮಾಡುತ್ತದೆ ಎಂದರು.

ಕಾರ್ಯಕ್ರದಲ್ಲಿ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪಿಗೆ, ಸ್ತ್ರೀ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಿಗೆ, ಸ್ತ್ರೀ ಶಕ್ತಿ ಗುಂಪಿನ ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಸನ್ಮಾನ ಮಾಡಲಾಯಿತು.

Last Updated : Feb 13, 2020, 3:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.