ಮಂಗಳೂರು: ಬಿಲ್ಲವ ಸಮುದಾಯ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹಾಗೂ ಕೋಟಿ-ಚೆನ್ನಯರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮುಖಕ್ಕೆ ಮೊದಲು ಮಸಿ ಬಳಿಯುವ ಬಿಲ್ಲವ ಸಮುದಾಯದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿಯವರು ಫೇಸ್ಬುಕ್ ಲೈವ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಲ್ಲವ ಮುಖಂಡ ಬಿ.ಜನಾರ್ದನ ಪೂಜಾರಿಯವರ ಕಾಲು ಹಿಡಿಯೋದಿಲ್ಲ ಎಂದು ಹೇಳಿಕೆ ನೀಡಿರುವ ಜಗದೀಶ್ ಅಧಿಕಾರಿಯವರು ಅವರ ಕಾಲು ಹಿಡಿದು ಕ್ಷಮೆಯಾಚಿಸಬೇಕು. ವೀರ ಪುರುಷ ಕೋಟಿ ಚೆನ್ನಯ್ಯರನ್ನು ಅವಹೇಳನ ಮಾಡಿದ್ದಕ್ಕೆ ಮೂರು ದಿನದಲ್ಲಿ ತಪ್ಪು ಕಾಣಿಕೆ ಹಾಕಬೇಕು ಎಂದು ಹೇಳಿದ್ದಾರೆ.
ಓದಿ: ಮೈಸೂರಿನಲ್ಲಿ ಹರಿದ ನೆತ್ತರು : ಜೋಡಿ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ
ಮೂರು ದಿನಗಳಲ್ಲಿ ಜಗದೀಶ್ ಅಧಿಕಾರಿಯವರು ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚನೆ ಮಾಡಬೇಕು ಎಂದು ಕುಳಾಯಿ ಆಗ್ರಹಿಸಿದ್ದಾರೆ.