ETV Bharat / state

ಕಸ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್​ ಎಚ್ಚರಿಕೆ... - District Collector warns

ಸುಳ್ಯ ನಗರ ಪಂಚಾಯತ್​​ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ದಿಢೀರ್ ಭೇಟಿ ನೀಡಿ ಶೆಡ್​​ನಲ್ಲಿ ಸಂಗ್ರಹಿಸಿದ್ದ ಕಸವನ್ನು ವಾರದೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ನೀಡಿದರು.

District Collector warns officials not to dispose of garbage
author img

By

Published : Nov 9, 2019, 12:00 AM IST

ಸುಳ್ಯ: ನಗರ ಪಂಚಾಯತ್​​ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ದಿಢೀರ್ ಭೇಟಿ ನೀಡಿ ಶೆಡ್​​ನಲ್ಲಿ ಸಂಗ್ರಹಿಸಿದ್ದ ಕಸವನ್ನು ವಾರದೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ನೀಡಿದರು.

ತ್ಯಾಜ್ಯ ವಿಲೇವಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಬೆಳಗ್ಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗೆ ತಹಶೀಲ್ದಾರ್​​ ಕುಂಞ ಅಹಮ್ಮದ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ.ಇಂಜಿನಿಯರ್ ಶಿವಕುಮಾರ್, ಆರೋಗ್ಯಾಧಿಕಾರಿ ರವಿಕೃಷ್ಣ, ನ.ಪಂ.ಮುಖ್ಯಾಧಿಕಾರಿ ಮತ್ತಾಡಿ ಅವರು ವಿವರಿಸಿದ್ದರು.

ಬಳಿಕ ನಗರ ಪಂಚಾಯತ್​​ಗೆ ಆಗಮಿಸಿದ ಜಿಲ್ಲಾಧಿಕಾರಿ ಕಸದ ರಾಶಿ ನೋಡಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕೂಡಲೇ ಕಸ ವಿಲೇವಾರಿ ಮಾಡುವಂತೆ ಸೂಚಿಸಿದರು. ತ್ಯಾಜ್ಯ ಸಂಗ್ರಹಿಸುವಾಗಲೇ ಬೇರ್ಪಡಿಸಬೇಕು. ಆ ದಿನದ ಕಸವನ್ನು ಅಂದೇ ವಿಲೇವಾರಿ ಮಾಡಬೇಕು. ಹೀಗೆ ಸಂಗ್ರಹಿಸಿಟ್ಟರೆ ತುಂಬಾ ಸಮಸ್ಯೆಗಳು ಉದ್ಭವವಾಗುತ್ತವೆ. ಬರ್ನಿಂಗ್ ಮೆಷಿನ್ ಪಡೆದುಕೊಂಡು ತಕ್ಷಣ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು.

Intro:ಸುಳ್ಯ

ನಗರ ಪಂಚಾಯತ್ ಆವರಣದಲ್ಲಿ ಸಂಗ್ರಹವಾದ ಕಸವನ್ನು ಒಂದು ವಾರದೊಳಗೆ ವಿಲೇವಾರಿಗೊಳಿಸುವಂತೆ ಜಿಲ್ಲಾಧಿಕಾರಿಯವರಿಂದ ಖಡಕ್ ಸೂಚನೆ.Body:
ಸುಳ್ಯ ನಗರ ಪಂಚಾಯತ್ ಗೆ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರು ಧಿಡೀರ್ ಭೇಟಿ ನೀಡಿ ನಗರ ಪಂಚಾಯತ್ ನ ಶೆಡ್ ನಲ್ಲಿ ಸಂಗ್ರಹಿಸಲಾಗಿದ್ದ ಕಸವನ್ನು ವೀಕ್ಷಿಸಿ ಒಂದು ವಾರದೊಳಗೆ ವಿಲೇವಾರಿ ಮಾಡುವಂತೆ ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.ಇಂದು ಬೆಳಿಗ್ಗೆ ಸುಳ್ಯ ತಾಲೂಕು ಕಛೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಸುಳ್ಯ ನಗರದಲ್ಲಿ ಅಧಿಕಾರಿ ವರ್ಗದವರಿಗೆ ಬಹಳಷ್ಟು ತಲೆನೋವಾಗಿ ಪರಿಣಮಿಸಿದ ತ್ಯಾಜ್ಯ ವಿಲೇವಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಸುಳ್ಯ ತಹಶಿಲ್ದಾರರಾದ ಕುಂಞ ಅಹಮ್ಮದ್ ,ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ ,ನ.ಪಂ.ಇಂಜಿನಿಯರ್ ಶಿವಕುಮಾರ್,ಆರೋಗ್ಯಾಧಿಕಾರಿ ರವಿಕೃಷ್ಣ, ನ.ಪಂ.ಮುಖ್ಯಾಧಿಕಾರಿ ಮತ್ತಾಡಿ ಮುಂತಾದವರು ವಿವರಿಸಿದರು.
ನಂತರ ನಗರ ಪಂಚಾಯತ್ ಗೆ ಆಗಮಿಸಿದ ಜಿಲ್ಲಾಧಿಕಾರಿಗಳು ನ.ಪಂ.ಎದುರು ಹಾಕಿದ ಕಸದ ರಾಶಿ ನೋಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ ಕಸವನ್ನು ಕೂಡಲೇ ವಿಲೇವಾರಿ ಮಾಡಿ ವಾರದೊಳಗೆ ಸಂಪೂರ್ಣವಾಗಿ ವಿಲೇವಾರಿಗೊಳಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಈ ಸಂದರ್ಭ ಕಸ ವಿಲೇವಾರಿಯ ಕುರಿತು ಜಿಲ್ಲಾಧಿಕಾರಿಗಳು ನ. ಪಂ. ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾ, ತ್ಯಾಜ್ಯವನ್ನು ಸಂಗ್ರಹಿಸುವಾಗಲೇ ಬೇರ್ಪಡಿಸಿ ಪಡೆಯಬೇಕು ಮತ್ತು ಅದೇ ದಿನದ ಕಸವನ್ನು ಅಂದೇ ವಿಲೇವಾರಿ ಮಾಡಬೇಕು.
ಹೀಗೆ ಸಂಗ್ರಹಿಸಿ ಇಟ್ಟರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿರಬೇಕು. ಬರ್ನಿಂಗ್ ಮೆಷಿನ್ ಕೂಡಲೇ ಪಡೆದುಕೊಂಡು ತಕ್ಷಣ ಕಾರ್ಯಪ್ರವೃತ್ತರಾಗಿ,ಎಂದು ಸೂಚಿಸಿದರು.Conclusion:ಈ ಸಂದರ್ಭದ್ದಲ್ಲಿ ನಗರಪಂಚಾಯತ್ ಸದಸ್ಯರು , ಸುಳ್ಯ ತಾಲೂಕಿಗೆ ಸಂಭಂಧಿಸಿದ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.