ಸುಳ್ಯ : ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿನಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಯಶಸ್ವಿನಿ ಮೃತ ವಿದ್ಯಾರ್ಥಿನಿ. ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬುವರ ಪುತ್ರಿ 13 ವರ್ಷದ ಯಶಸ್ವಿನಿ ವಾರದ ಹಿಂದೆ ಅಂಗಡಿಯೊಂದರಿಂದ ಇಲಿ ಪಾಷಾಣ ತಂದು ನಂತರ ಅದನ್ನು ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ.
ಶಾಲೆಯಲ್ಲಿ ಅಸ್ವಸ್ಥಗೊಂಡ ಈಕೆಯನ್ನು ಶಿಕ್ಷಕರು ಉಪಚರಿಸಿ ಮನೆಗೆ ಕಳುಹಿಸಿದ್ದರು. ಆದರೆ, ಬಳಿಕ ಅಸೌಖ್ಯ ಉಲ್ಬಣಗೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.