ETV Bharat / state

ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್ ಚಿನ್ನ ಪತ್ತೆ

author img

By

Published : May 5, 2022, 9:01 PM IST

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ 24 ಕ್ಯಾರೆಟ್​ನ ತಲಾ 732 ಗ್ರಾಂ ಹಾಗೂ 116.540 ಗ್ರಾಂ ಚಿನ್ನ ಪತ್ತೆಯಾಗಿದೆ.

Customs officials seized gold in mangaluru airport
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 848 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ದುಬೈನಿಂದ ಬಂದ ಪ್ರಯಾಣಿಕನೋರ್ವನನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಆತನ ಗುದದ್ವಾರದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ಈತನ ಬಳಿ 24 ಕ್ಯಾರೆಟ್ 732 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 37,69,800 ರೂ. ಎಂದು ಅಂದಾಜಿಸಲಾಗಿದೆ.

ದುಬೈನಿಂದಲೇ ಬಂದ ಮತ್ತೋರ್ವ ಪ್ರಯಾಣಿಕ ಪ್ರತಿಷ್ಠಿತ ಸಂಸ್ಥೆಯ ಬ್ರಾಂಡ್​ನ ಡೈರಿ ಕ್ರೀಂ ಟಿನ್​ನೊಳಗಡೆ ಇರಿಸಿದ್ದ 24 ಕ್ಯಾರೆಟ್​ನ 116.540 ಗ್ರಾಂ ಚಿನ್ನ ದೊರೆತಿದೆ. ಇದರ ಮೌಲ್ಯ 6,00,181 ರೂ. ಅಂದಾಜಿಸಲಾಗಿದೆ. ಈ ಎರಡು ಪ್ರಕರಣದಲ್ಲೂ ಪತ್ತೆಯಾದ ಚಿನ್ನ ಮತ್ತು ಪ್ರಯಾಣಿಕರನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.