ಮಂಗಳೂರು : ಕೊರೊನಾ ಕರ್ಫ್ಯೂ ಇದ್ದರೂ ಮಂಗಳೂರಿನ ರಸ್ತೆಗಳು ವಾಹನ ಸಂಚಾರದಿಂದ ಗಿಜಿಗಿಡುತ್ತಿದ್ದು, ಬೆಳಗ್ಗೆ 10 ಗಂಟೆಯ ಬಳಿಕ ರಸ್ತೆ ಸಂಚಾರಕ್ಕೆ ಅವಕಾಶ ಇಲ್ಲದಿದ್ದರೂ ಅನಗತ್ಯ ಸಂಚಾರ ನಡೆಸುತ್ತಿರುವುದು ಕಂಡು ಬಂದಿದೆ.
ಕರ್ಫ್ಯೂ ಸಡಿಲಿಕೆ ಬಳಿಕ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಎಲ್ಲರನ್ನೂ ನಿಲ್ಲಿಸಿ ವಿಚಾರಿಸಿ ಕಳುಹಿಸುತ್ತಿದ್ದಾರೆ. ಅಲ್ಲದೇ ಅನಗತ್ಯ ಸಂಚಾರ ಮಾಡುವವರನ್ನು ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ.
ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ನಿನ್ನೆ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡು ಬಂದಿದೆ.
ಈ ಹಿನ್ನೆಲೆ ವ್ಯಾಪಾರಿಗಳಿಗೆ ಇಂದು ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಹಂಪಲು ಇನ್ನಿತರ ಸಾಮಗ್ರಿಗಳ ಮಾರಾಟ ಮಾಡಲು ಬಿಡದೇ ಬ್ಯಾರಿಕೇಡ್ ಹಾಕಲಾಗಿತ್ತು.
ಪುರಭವನದ ಬದಿಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಇಂದು ಕೂಡ ಜನರು ಮುಗಿಬಿದ್ದು, ಖರೀದಿಗೆ ಮುಂದಾಗಿದ್ದಾರೆ.