ETV Bharat / state

ಮಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಯುವಕ - ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಯುವಕನೊಬ್ಬ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

crime-young-man-committed-suicide-by-shooting-himself-in-sullia
ಮಂಗಳೂರು: ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಯುವಕ
author img

By

Published : Jun 28, 2023, 4:29 PM IST

Updated : Jun 28, 2023, 10:34 PM IST

ಸುಳ್ಯ (ದಕ್ಷಿಣ ಕನ್ನಡ): ಬಂದೂಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ
ಬೆಳ್ರಂಪಾಡಿಯ ಮನೆಯೊಂದರಲ್ಲಿ ಕೆಲವು ದಿನಗಳಿಂದ ಕೆಲಸಕ್ಕಿದ್ದು, ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ.

ಬೆಳ್ರಂಪಾಡಿ‌ ಎಂಬಲ್ಲಿ ಗುಡ್ಡಕ್ಕೆ ತೆರಳಿ, ತಲೆಗೆ ಗುಂಡು ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ‌ ರಾತ್ರಿಯೇ ಸುಳ್ಯ ಪೋಲೀಸರು ಭೇಟಿ ನೀಡಿ ‌ಮತದೇಹವನ್ನು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ‌ಎಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ: ಹೆರಿಗೆಯಾಗಿ 15 ದಿನಗಳಲ್ಲೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಜೋಗಿಮಠದ ನಿವಾಸಿ ಅನಿಶಾ (34) ಆತ್ಮಹತ್ಯೆಗೆ ಶರಣಾದ ಮಹಿಳೆ. ಈ ಕುರಿತು ಅವರ ಸಹೋದರ ಮುನೀರ್ ಅಹ್ಮದ್​ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿಶಾ ಅವರು ವಿವಾಹವಾಗಿ ಜೋಗಿಮಠದಲ್ಲಿ ವಾಸಿಸುತ್ತಿದ್ದು, ಅವರಿಗೆ ನವಜಾತ ಗಂಡು ಶಿಶು ಸೇರಿದಂತೆ ಮೂವರು ಮಕ್ಕಳಿದ್ದರು.

ಇವರಿಗೆ ಹೆರಿಗೆಯಾಗಿ ಕೇವಲ ಹದಿನೈದು ದಿನಗಳಾಗಿದ್ದು, ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ವಿಟ್ಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಗ್ಗೆ ಸುಮಾರು 5ರಿಂದ 8ರ ಮಧ್ಯೆ ಮನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪತ್ನಿ ಹಂತಕನಿಗೆ 7 ವರ್ಷ ಕಠಿಣ ಶಿಕ್ಷೆ: ಮತ್ತೊಂದೆಡೆ, ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಪತ್ನಿಗೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿ ಪತಿಗೆ ಏಳು ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಧರ್ಮಸ್ಥಳ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಜಾನ್ಸನ್ ಕೆ.ಎಂ (41) ಶಿಕ್ಷೆಗೊಳಗಾದ ಅಪರಾಧಿ.2021 ರ ಜ.7 ರಂದು ರಾತ್ರಿ ಜಾನ್ಸನ್ ಪತ್ನಿ ಸೌಮ್ಯ ಫ್ರಾನ್ಸಿಸ್ (36) ಎಂಬವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ, ದೊಣ್ಣೆಯಿಂದ ಹೊಡೆದಿದ್ದನು. ಗಂಭೀರ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಸೌಮ್ಯ ಅವರ ಸೋದರ ಬೆಳ್ತಂಗಡಿ ಠಾಣೆಯಲ್ಲಿ ನೀಡಿರುವ ದೂರಿನಂತೆ ಐಪಿಸಿ 498(ಎ) ಹಾಗೂ 302ರನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣ ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತ್ತು. ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಡಾ. ಸೂರಜ್ ಶೆಟ್ಟಿಯವರು ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದರು.

ಇದನ್ನೂ ಓದಿ: Bengaluru crime: ವಿಳಾಸ ಕೇಳುವ ನೆಪದಲ್ಲಿ ವಕೀಲನನ್ನೇ ಅಪಹರಿಸಿದ ಗ್ಯಾಂಗ್: 20 ಸಾವಿರ ರೂ. ಸುಲಿಗೆ ಮಾಡಿದ ಅಪಹರಣಕಾರರು

Last Updated : Jun 28, 2023, 10:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.