ETV Bharat / state

ಬಸ್ ತಂಗುದಾಣ ಉದ್ಘಾಟನೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಭಾರೀ ವೈರಲ್ ಆದ ಫೋಟೋ

author img

By

Published : Apr 17, 2021, 1:57 AM IST

ಬಸ್ ತಂಗುದಾಣ ಉದ್ಘಾಟನೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿರುವ ಘಟನೆ ಮಂಗಳೂರು ಜಿಲ್ಲೆ ನಡೆದಿದೆ.

Covid rule break, Covid rule break at bus stop inauguration, Covid rule break at bus stop inauguration in Mangalore, Mangalore news, ಬಸ್ ತಂಗುದಾಣ ಉದ್ಘಾಟನೆ, ಬಸ್ ತಂಗುದಾಣ ಉದ್ಘಾಟನೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, ಮಂಗಳೂರಿನಲ್ಲಿ ಕೊರೊನಾ ಸುದ್ದಿ,
ಬಸ್ ತಂಗುದಾಣ ಉದ್ಘಾಟನೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ

ಮಂಗಳೂರು: ನಗರದ ಕಟೀಲಿನಲ್ಲಿ ಬಸ್ ತಂಗುದಾಣ ಉದ್ಘಾಟನೆ ಸಂದರ್ಭ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಸೇರಿ ಅತಿಥಿಗಳು ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಫೋಟೊವೊಂದು ಭಾರಿ ವೈರಲ್ ಆಗುತ್ತಿದೆ.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ 92 ಲಕ್ಷ ರೂ. ವೆಚ್ಚದಲ್ಲಿ ಪಾರ್ಕಿಂಗ್ ಏರಿಯಾ, 37 ಲಕ್ಷ ರೂ. ವೆಚ್ಚದಲ್ಲಿ ಫುಟ್ ಪಾತ್ ಹಾಗೂ ಬಸ್ ತಂಗುದಾಣವನ್ನು ದ.ಕ.ಜಿಲ್ಲಾ ಸಂಸದ್ ನಳಿನ್ ಕುಮಾರ್ ಉದ್ಘಾಟಿಸಿದ್ದರು. ಆ ಬಳಿಕ ಜನಪ್ರತಿನಿಧಿಗಳ ಜೊತೆಗೆ ಅತಿಥಿಗಳು ಬಸ್ ನಿಲ್ದಾಣದಲ್ಲಿ ಜೊತೆಜೊತೆಯಲ್ಲಿ ಕುಳಿತು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧಾರಣೆ ಮಾಡದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಫೋಟೋ ತೆಗೆದಿದ್ದಾರೆ.

Body:ಬಸ್ ನಿಲ್ದಾಣದಲ್ಲಿ 'ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ನಿಮ್ಮನ್ನು ಸಹ ಇತರರನ್ನೂ ರಕ್ಷಿಸಿ' ಎಂದು ಜಾಗೃತಿ ಬರಹ ಬರೆಯಲಾಗಿತ್ತು. ಆದರೆ ಅದರ ಮುಂಭಾಗವೇ ಎಲ್ಲರೂ ಕುಳಿತು ಸಂಪೂರ್ಣ ಕೋವಿಡ್ ನಿಯಮಗಳನ್ನು ಮರೆತು ಫೋಟೋ ತೆಗೆಸಿಕೊಂಡಿದ್ದಾರೆ‌. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.