ಮಂಗಳೂರು : ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಅವರ ಅಭಿಮಾನಿಗಳು ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಅವರ ಪತ್ನಿಗೆ ಶನಿವಾರ ಕೊರೊನಾ ದೃಢಪಟ್ಟಿತ್ತು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಲಾಯಿತು. ಐವನ್ ಡಿಸೋಜ ಕೊರೊನಾ ಆರಂಭದ ದಿನದಿಂದಲೂ ಸತತ 5 ತಿಂಗಳಿನಿಂದ ಸಾರ್ವಜನಿಕ ಸಂಪರ್ಕದೊಂದಿಗೆ ಅಕ್ಕಿ, ಮಾಸ್ಕ್, ಹಾಲು ಹಾಗೂ ಸ್ಯಾನಿಟೈಸರ್ ವಿತರಣೆ ಮೊದಲಾದ ಸೇವೆಯಲ್ಲಿ ತೊಡಗಿದ್ದರು ಎಂದು ಸ್ಮರಿಸಿದ ಅಭಿಮಾನಿ ಬಳಗ, ಕೊರೊನಾ ಸೋಂಕಿತ ಐವನ್ ಡಿಸೋಜ ಮತ್ತು ಅವರ ಪತ್ನಿ ಹಾಗೂ ಕ್ವಾರಂಟೈನ್ನಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರುಗಳು ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಾಜಿ ಕಾರ್ಪೊರೇಟರ್ಗಳಾದ ಭಾಸ್ಕರ್‌ರಾವ್, ನಾಗೇಂದ್ರ ಕುಮಾರ್, ಸ್ಯಾಕ್ಸೋಫೋನ್ ವಾದಕ ಮಚ್ಚೇಂದ್ರನಾಥ್ ಮತ್ತಿತರರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.