ETV Bharat / state

ದ.ಕ ಜಿಲ್ಲೆಯಲ್ಲಿ ಸೊಸೆ ಬಳಿಕ ಅತ್ತೆಯನ್ನೂ ಬಲಿ ಪಡೆದ ಕೊರೊನಾ! - corona latest news in karnataka

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 78 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ವೃದ್ಧೆ ಮೃತಪಟ್ಟಿದ್ದಾರೆ.

Corona infection is the second victim in the district
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 2ನೇ ಬಲಿ
author img

By

Published : Apr 23, 2020, 8:09 PM IST

ಮಂಗಳೂರು: ಮಹಾಮಾರಿ ಕೊರೊನಾಗೆ ವೃದ್ಧೆಯೊಬ್ಬರು ಇಂದು ಬಲಿಯಾಗಿದ್ದು, ರಾಜ್ಯದಲ್ಲಿ ಕೋವಿಡ್-19ಗೆ ಅಸುನೀಗಿದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟ ಎರಡನೇ ಸಾವು ಇದಾಗಿದೆ.

Corona infection is the second victim in the district
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 2ನೇ ಬಲಿ
ಇಂದು ಬೆಳಗ್ಗೆಯಷ್ಟೇ ರೋಗಿ-432 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 78 ವರ್ಷದ ವೃದ್ಧೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ರೋಗಿ-390ರ ಸಂಪರ್ಕಿಕದಲ್ಲಿ ಇದ್ದರು. ದಕ್ಷಿಣ ಕನ್ನಡದ ಪ್ರತ್ಯೇಕ ಆಸ್ಪತ್ರೆಯಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೃದ್ಧೆ ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯುವ ವೇಳೆ ಸೊಸೆ ಆಸ್ಪತ್ರೆಗೆ ಭೇಟಿ ನೀಡಿ, ವೃದ್ಧೆಯ ಆರೋಗ್ಯ ವಿಚಾರಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಸೊಸೆಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಸೊಸೆಯಿಂದಲೇ ಅತ್ತೆಗೂ ಕೊರೊನಾ ಬಂದಿದೆ ಎನ್ನಲಾಗಿದೆ. ಸೊಸೆಯಾದ ರೋಗಿ ಸಂಖ್ಯೆ 390 ಏಪ್ರಿಲ್ 19ರಂದು ಮೃತಪಟ್ಟಿದ್ದರು. ಅತ್ತೆ-ಸೊಸೆ‌ ಇಬ್ಬರನ್ನೂ ಕಿಲ್ಲರ್ ಕೊರೊನಾ ಬಲಿ ಪಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.