ಮಂಗಳೂರು: ಕೊರೊನಾ ವೈರಸ್ ಹಾವಳಿಯಿಂದ ವಿವಿಧ ರಂಗಗಳ ಮೇಲೆ ದುಷ್ಪರಿಣಾಮ ಬೀರಿದೆ. ಅದರಲ್ಲಿಯೂ ನಗರಗದ ವ್ಯಾಪಾರಗಳ ಮೇಲೆ ಕರಿನೆರಳು ಬಿದ್ದಿದ್ದು, ಸಾಕಷ್ಟು ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಈ ಹಿನ್ನೆಲೆ ಮುಂದಿನ ವರ್ಷದಲ್ಲಿ ಟ್ರೇಡ್ ಲೈಸೆನ್ಸ್ ನವೀಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಆತಂಕ ವ್ಯಾಪಾರದ ಮೇಲೂ ಪರಿಣಾಮ ಬೀರಿದ್ದು, ವ್ಯಾಪಾರಿಗಳು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಮಂಗಳೂರು ನಗರದಲ್ಲಿ ವ್ಯವಹಾರ ನಡೆಸುವ ಅಂಗಡಿ ಮುಂಗಟ್ಟುಗಳು ಸಂಸ್ಥೆಗಳು ಟ್ರೇಡ್ ಲೈಸೆನ್ಸ್ ನವೀಕರಿಸುವ ಬಗ್ಗೆ ಚಿಂತೆಯಲ್ಲಿದೆ. ಮಾರ್ಚ್ ಬಳಿಕ ಕೊರೊನಾ ಸೃಷ್ಟಿಸಿದ ಆತಂಕದಿಂದ ವಹಿವಾಟು ಮೇಲೆ ದುಷ್ಪರಿಣಾಮ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ನವೀಕರಣದ ಮೇಲೆ ಅಡ್ಡಪರಿಣಾಮ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವರ್ಷದ ಟ್ರೇಡ್ ಲೈಸೆನ್ಸ್ ನವೀಕರಣ ಮಾರ್ಚ್ಗೆ ಅಗತ್ಯವಾಗಿದೆ. ಆದ ಕಾರಣ ಮುಂದಿನ ವರ್ಷ ಮಾರ್ಚ್ನಲ್ಲಿ ವ್ಯವಹಾರ ಮಾಡುವವರು ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಹಾವಳಿಯ ಬಳಿಕ ಹಲವು ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಪಾಲಿಕೆಯಿಂದ ಟೆಂಡರ್ ಮೂಲಕ ಪಡೆದಿರುವ ಅಂಗಡಿಗಳು ತೆರೆಯಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪಾಲಿಕೆಗೆ ಆದಾಯ ಮೂಲವಾಗಿದ್ದ ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿ ವ್ಯಾಪಾರದ ಮೇಲೆ ಬೀರಿರುವ ಕರಿನೆರಳು ಮುಂದಿನ ದಿನಗಳಲ್ಲಿ ಟ್ರೇಡ್ ಲೈಸೆನ್ಸ್ ನವೀಕರಣ ಮೇಲೂ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.