ETV Bharat / state

ಕೊರೊನಾ ಭ್ರಷ್ಟಾಚಾರ ನ್ಯಾಯಾಧೀಶರಿಂದ ತನಿಖೆಯಾಗಲಿ: ಡಿ.ಕೆ.ಶಿವಕುಮಾರ್

ಸರ್ಕಾರ 20 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ರೂ, ಯಾರಿಗೂ ಇವತ್ತಿಗೂ ಪರಿಹಾರ ನೀಡಿಲ್ಲ. ಚಾಲಕರು ಸತ್ತ ಮೇಲೆ ಅವರಿಗೆ ಸಹಾಯಧನ ನೀಡುತ್ತೀರಾ?. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ.‌ ಕೊರೊನಾದ ಹೆಣದ ಮೇಲೆ ಹಣ ಮಾಡಲು ಹೊರಟಿದ್ದು, ಕೊರೊನಾ ಆಸ್ಪತ್ರೆಗಳಿಗೆ ಯಾವುದೇ ಬಿಜೆಪಿ ನಾಯಕರು ಭೇಟಿ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

corona Corruption of Government should be investigate by judge: DK Shivakumar
ರಾಜ್ಯ ಸರ್ಕಾರದ ಕೊರೊನಾ ಭ್ರಷ್ಟಾಚಾರ ನ್ಯಾಯಾಧೀಶರಿಂದ ತನಿಖೆಯಾಗಲಿ: ಡಿಕೆ ಶಿವಕುಮಾರ್
author img

By

Published : Jul 31, 2020, 5:54 PM IST

ಮಂಗಳೂರು (ದ.ಕ): ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ ಬಹುದೊಡ್ಡ ಹಗರಣ ನಡೆಸಿದೆ. ಈ ಹಗರಣವನ್ನು ಕೋರ್ಟ್ ಮೂಲಕ‌ ನ್ಯಾಯಾಧೀಶರಿಂದ ತನಿಖೆ ನಡೆಸಲಿ. ನಾವು ತಪ್ಪು ಮಾಡಿದ್ದಲ್ಲಿ ನಮ್ಮದೂ ಸೇರಿಸಿ ತನಿಖೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೂ ಇಡಿ, ಸಿಬಿಐ, ಆದಾಯ ತೆರಿಗೆ, ಆರ್ಥಿಕ ಅಪರಾಧ ಎಲ್ಲಾ ಮಾಡಿಸಿ, ಗಲ್ಲಿಗೆ ಹಾಕಬೇಕೆಂದು ಹೊರಟಿದ್ದೀರಲ್ಲಾ, ಅದನ್ನೂ ಮಾಡಿ ಏನೂ ತೊಂದರೆ ಇಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ತಯಾರಾಗಿದ್ದೇನೆ ಎಂದರು.

ರಾಜ್ಯ ಸರ್ಕಾರದ ಕೊರೊನಾ ಭ್ರಷ್ಟಾಚಾರ ನ್ಯಾಯಾಧೀಶರಿಂದ ತನಿಖೆಯಾಗಲಿ: ಡಿಕೆ ಶಿವಕುಮಾರ್

ಸರ್ಕಾರ ಸರಿಯಾಗಿ ಊಟ, ವಸತಿ, ಕೆಲಸ, ಧೈರ್ಯ ನೀಡಿದ್ದರೆ ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ. ಕೊನೆಗೆ ಅವರನ್ನು‌ ತಮ್ಮ ರಾಜ್ಯಗಳಿಗೆ ಕಳುಹಿಸುವಾಗ ಆಹಾರದ ಕಿಟ್​ಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದ್ದೀರಿ. ಆದರೆ ಅವರಿಗೆ ಆಹಾರ ಕೊಟ್ಟಿದ್ದು ಎನ್​​ಜಿಓಗಳು. ಆದರೆ ನೀವು ಅದೆಲ್ಲದರ ಲೆಕ್ಕ ಕೊಟ್ಟು 85 ಕೋಟಿ ರೂ. ದೋಚಿದ್ದೀರಿ. ಜೊತೆಗೆ ಈ ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಕೊಡುವ ಕಿಟ್​ಗಳಲ್ಲಿ ಮೋದಿ ಚಿಹ್ನೆ, ಪಕ್ಷದ ಚಿಹ್ನೆ ಬಳಸಿ ಶಾಸಕರು ತಮ್ಮ ಹೆಸರಿನಲ್ಲಿ ಕೊಡಲು ಆರಂಭಿಸಿದರು ಎಂದು ಆರೋಪಿಸಿದರು.

ಸರ್ಕಾರ 20 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರೂ, ಯಾರಿಗೂ ಇವತ್ತಿಗೂ ಪರಿಹಾರ ನೀಡಿಲ್ಲ. ಚಾಲಕರು ಸತ್ತ ಮೇಲೆ ಅವರಿಗೆ ಸಹಾಯಧನ ನೀಡುತ್ತೀರಾ? ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ.‌ ಕೊರೊನಾದ ಹೆಣದ ಮೇಲೆ ಹಣ ಮಾಡಲು ಹೊರಟಿದ್ದು, ಕೊರೊನಾ ಆಸ್ಪತ್ರೆಗಳಿಗೆ ಯಾವುದೇ ಬಿಜೆಪಿ ನಾಯಕರು ಭೇಟಿ ನೀಡಿಲ್ಲ ಎಂದರು.

ಅದೇ ರೀತಿ ನಮ್ಮ ಜಿಲ್ಲೆ, ರಾಜ್ಯ ಕಟ್ಟಲು ಪರಿಶ್ರಮ ವಹಿಸಿದವರು ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಬಂದರೆ ಅವರನ್ನು ಬಿಜೆಪಿಗರು ಅಸ್ಪೃಶ್ಯರಂತೆ ಕಂಡರು. ಅವರನ್ನು ಬರದಂತೆ ತಡೆದಿರಿ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಳಿನ್ ಕುಮಾರ್‌ ಕಟೀಲ್‌ಗೆ ಟಾಂಗ್:

ನಳಿನ್ ಕುಮಾರ್​ ಕಟೀಲ್​​​​​ ಹೇಳಿರುವ ವಿಚಾರವನ್ನು ನಾನು‌ ಸ್ವಾಗತಿಸುತ್ತೇನೆ. ಇಡೀ ದೇಶವನ್ನೇ ಅವರು‌ ಸ್ವಾಧೀನಪಡಿಸಿಕೊಳ್ಳಲಿ. ನಾನು‌ ನಮ್ಮ 224 ಮಂದಿಯೂ ಅವರ ಸಂಪರ್ಕದಲ್ಲಿದ್ದಾರೆಂದು ತಿಳಿದುಕೊಂಡಿದ್ದೇನೆ. ಆದರೆ ಅವರು ಕೇವಲ 15 ಮಂದಿ‌ ಶಾಸಕರನ್ನು‌ ಮಾತ್ರ ಯಾಕೆ ಹೇಳಿದ್ದಾರೆ? ಎಂದು ತಿಳಿದು ಬರುತ್ತಿಲ್ಲ. ಬಿಜೆಪಿ ಎಷ್ಟಾದರೂ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲಿ. ಆದರೆ ನಮ್ಮ ಗುರಿ ಪಕ್ಷ ಸಂಘಟನೆ ಮಾತ್ರ. ಈ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುತ್ತೇವೆ ಎಂದು‌ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.