ಮಂಗಳೂರು : ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದ 14 ವಯೋಮಿತಿಯೊಳಗಿನ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನೆಲ್ಯಾಡಿ ಬೆಥನಿ ಪದವಿ ಪೂರ್ವ ಕಾಲೇಜಿನ ಎಂಟನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿಗೆ ಶಾಲಾ ಅಧ್ಯಾಪಕರು ಹಾಗೂ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಬೆಥನಿ ಶಾಲೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ನೆಲ್ಯಾಡಿ ಕೊಲ್ಯೋಟ್ಟು ನಿವಾಸಿ ರತ್ನಾಕರ್ ಹಾಗೂ ಹೇಮಲತಾ ದಂಪತಿಯ ತೃತೀಯ ಪುತ್ರನಾದ ಆದರ್ಶ್ರಾ ರಾಷ್ಟ್ರ ಮಟ್ಟದ ಸ್ಪರ್ಧೆಗಾಗಿ ಪಂಜಾಬಿಗೆ ತೆರಳಲಿದ್ದಾರೆ. ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ನಂತರ ಆದರ್ಶ್ ತನ್ನ ಗುರುಗಳಿಂದ ಆಶೀರ್ವಾದ ಪಡೆದನು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ರೆವರೆಂಡ್ ಫಾದರ್ ಡಾ. ವರ್ಗೀಸ್ ಕೈಪನಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಉಪಾಧ್ಯಕ್ಷೆ ಅನ್ನಮ್ಮ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಆದರ್ಶ್ ನ ಪೋಷಕರು ಉಪಸ್ಥಿತರಿದ್ದರು.