ಭಟ್ಕಳ: ಏಪ್ರಿಲ್ 3 ಶುಕ್ರವಾರದಂದು ಹೊಟ್ಟೆನೋವು ಎಂದು ಸರಕಾರಿ ಆಸ್ಪತ್ರೆಗೆ ತಪಾಸಣೆಗೆ ಬಂದ ವ್ಯಕ್ತಿಯ ತಪಾಸಣೆ ಮಾಡಿ ಆಸ್ಪತ್ರೆ ಮುದ್ರೆ ಹಾಕಿ ಹೋಮ್ ಕ್ವಾರಂಟೈನ ಮಹತ್ವ ತಿಳಿಸಿ ಮನೆಯಲ್ಲಿಯೇ ಇರಬೇಕೆಂದು ಸೂಚಿಸಿದ್ದರೂ ಆ ವ್ಯಕ್ತಿ ಕೊರೊನಾ ಲಾಕ್ಡೌನ್ ಉಲ್ಲಂಘನೆ ಮಾಡಿದ ಹಿನ್ನೆಲೆ ತಾಲೂಕು ಆರೋಗ್ಯಾಧಿಕಾರಿಗಳು ವ್ಯಕ್ತಿಯ ಮೇಲೆ ದೂರು ಸಲ್ಲಿಸಿದ್ದಾರೆ.
ಕ್ವಾರಂಟೈನ್ ಉಲ್ಲಂಘನೆ ಮಾಡಿದ ವ್ಯಕ್ತಿ (ಆರೋಪಿ) ತಾಲೂಕಿನ ಸಂಶುದ್ದೀನ್ ನವೀದ್ ಮೌಲಾ ಕಂಡಿ(36) ಇಲ್ಲಿನ ಫಾರೂಕಿ ಮೊಹೆಲ್ಲಾ ನಿವಾಸಿ ಎಂದು ತಿಳಿದು ಬಂದಿದೆ.
ಆದರೆ, ವ್ಯಕ್ತಿ ಏಪ್ರಿಲ್ 4 ಶನಿವಾರದಂದು ಸಾರ್ವಜನಿಕ ರಸ್ತೆಗಳಲ್ಲಿ ತಿರುಗಾಡಿ ಕೊರೊನಾ ಲಾಕ್ಡೌನ್ ಉಲ್ಲಂಘನೆ ಮಾಡಿ ಮಾಡಿದ್ದು, ಸಾಂಕ್ರಾಮಿಕ ರೋಗವನ್ನು ಹರಡಲು ಉದ್ದೇಶ ಪೂರ್ವಕವಾಗಿಯೇ ಪಟ್ಟಣದಲ್ಲಿ ತಿರುಗಾಡುತ್ತಿದ್ದಾರೆಂದು ಆರೋಪಿಸಿ ಭಟ್ಕಳ ನಗರ ಠಾಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ಮೇಲೆ ದೂರು ಸಲ್ಲಿಸಿದ್ದಾರೆ.
ದೂರು ದಾಖಲಿಸಿಕೊಂಡ ನಗರ ಠಾಣೆ ಎಎಸ್ಐ ನಾರಾಯಣ ಬೋಯರ ತನಿಖೆ ಮುಂದುವರೆಸಿದ್ದಾರೆ.