ETV Bharat / state

ಮೂಲ್ಕಿ: ಸಂಚರಿಸುತ್ತಿದ್ದ ರೈಲಿನಿಂದ ಬೇರ್ಪಟ್ಟು ಹಳಿಯಲ್ಲಿ ನಿಂತ ಬೋಗಿಗಳು!

ರೈಲ್ವೇ ಗೇಟ್​ ಸಮೀಪದ ಹಳಿಯಲ್ಲೇ ಬೋಗಿಗಳು ಬಾಕಿಯಾಗಿ ಎರಡೂ ಕಡೆಯಿಂದ ತೆರಳುವ ವಾಹನ ಸವಾರರು ಸುಮಾರು ಒಂದು ಗಂಟೆ ಕಾಲ ಸಮಸ್ಯೆ ಎದುರಿಸಿದರು.

coaches detach from the moving train
ಸಂಚರಿಸುತ್ತಿದ್ದ ರೈಲಿನಿಂದ ಬೇರ್ಪಟ್ಟು ಹಳಿಯಲ್ಲಿ ನಿಂತ ಬೋಗಿಗಳು
author img

By

Published : Feb 3, 2023, 12:56 AM IST

ಸಂಚರಿಸುತ್ತಿದ್ದ ರೈಲಿನಿಂದ ಬೇರ್ಪಟ್ಟು ಹಳಿಯಲ್ಲಿ ನಿಂತ ಬೋಗಿಗಳು

ಮಂಗಳೂರು: ಮೂಲ್ಕಿಯ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್‌ ಬಳಿಯಲ್ಲಿ ಗೂಡ್ಸ್ ರೈಲೊಂದು ಸಂಚರಿಸುತ್ತಿದ್ದಂತೆಯೇ ರೈಲಿನ ಮಧ್ಯಭಾಗದಿಂದ ಬೇರ್ಪಟ್ಟು ಬೋಗಿಗಳು ಹಳಿಯಲ್ಲಿಯೇ ಬಾಕಿಯಾದ ಘಟನೆ ನಡೆದಿದೆ. ಸುಮಾರು ಒಂದು ಗಂಟೆಗಳ ಕಾಲ ರೈಲ್ವೇ ಗೇಟ್‌ನಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಪಡುಬಿದ್ರಿಯಿಂದ ಮಂಗಳೂರಿನ ಎನ್‌ಎಂಪಿಟಿಯತ್ತ ತೆರಳುತ್ತಿದ್ದ ಗೂಡ್ಸ್ ರೈಲು ತಾಂತ್ರಿಕ ದೋಷದಿಂದ ಬೋಗಿಗಳು ಸಂಪರ್ಕ ಕಡಿದುಕೊಂಡು ಬೇರ್ಪಟ್ಟಿದ್ದವು.

ಇದರಿಂದ ಗೇಟ್ ಕೂಡಾ ತೆರೆದುಕೊಳ್ಳದೇ ನೂರಾರು ವಾಹನಗಳು ಎರಡೂ ಕಡೆಯಲ್ಲಿ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಉದ್ಭವಿಸಿತು. ಬೇರ್ಪಟ್ಟ ಸ್ಥಿತಿಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರ ಇಂಜಿನ್ ಮುಂದೆ ಚಲಿಸಿದೆ. ನಂತರ ಸುರತ್ಕಲ್‌ನಿಂದ ತಾಂತ್ರಿಕ ತಜ್ಞರು ಬಂದು ದುರಸ್ಥಿಗೊಳಿಸಿದ ಬಳಿಕ ಗೂಡ್ಸ್ ರೈಲು ಸಂಚಾರ ಮುಂದುವರಿಸಿತು. ಆ ಬಳಿಕ ಗೇಟ್ ತೆರವುಗೊಂಡಿದ್ದು, ವಾಹನ ಸವಾರರು ನಿರಾಳರಾದರು.

ಇದನ್ನೂ ಓದಿ: ಮಾರ್ಗ ಮಧ್ಯದಲ್ಲೇ ಇಂಜಿನ್​ನಿಂದ ವಿಭಜನೆಗೊಂಡ ರೈಲು ಬೋಗಿಗಳು.. ತಪ್ಪಿದ ಭಾರಿ ದುರಂತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.