ETV Bharat / state

'ಗೋಲಿಬಾರ್​ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಪರಿಹಾರ ಕೊಡಲ್ಲ' - ಮಂಗಳೂರಿನಲ್ಲಿ ಬಿಎಸ್​ವೈ ಹೇಳಿಕೆ

ಮಂಗಳೂರು ಪೊಲೀಸ್ ಗೋಲಿಬಾರ್​ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ, ಒಂದು ಪೈಸೆ ಪರಿಹಾರ ನೀಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

cm bsy statement in mangalore
ಮಂಗಳೂರಿನಲ್ಲಿ ಬಿಎಸ್​ವೈ ಹೇಳಿಕೆ
author img

By

Published : Dec 25, 2019, 12:16 PM IST

Updated : Dec 25, 2019, 1:09 PM IST

ಮಂಗಳೂರು: ಮಂಗಳೂರು ಪೊಲೀಸ್ ಗೋಲಿಬಾರ್​ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಒಂದು ಪೈಸೆ ಪರಿಹಾರ ನೀಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಗೋಲಿಬಾರ್​​ನಲ್ಲಿ ಮೃತಪಟ್ಟ ಇಬ್ಬರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಪರಿಹಾರಧನ ಇನ್ನೂ ಕೊಟ್ಟಿಲ್ಲ. ಘಟನೆಯಲ್ಲಿ ಸಾವನ್ನಪ್ಪಿದವರು ಆರೋಪ ಪಟ್ಟಿಯಲ್ಲಿ ಇದ್ದಾರೆ. ಒಂದು ವೇಳೆ ಅವರು ಅಪರಾಧಿಗಳೆಂದು ಸಾಬೀತಾದರೆ ಒಂದು ಪೈಸೆಯೂ ಪರಿಹಾರ ಕೊಡುವುದಿಲ್ಲ ಎಂದರು.

ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ

ಮಂಗಳೂರು ಗಲಭೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದಿದ್ದೇನೆ. ವಾಹನದಲ್ಲಿ ಕಲ್ಲು ತಂದು ತೂರಾಟ ಮಾಡಲಾಗಿದ್ದು ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಪೊಲೀಸ್ ಠಾಣೆ ಬಳಿಯ ಶಸ್ತ್ರಾಸ್ತ್ರ ಅಂಗಡಿಗೂ ನುಗ್ಗುವ ಪ್ರಯತ್ನ ಆಗಿತ್ತು. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು. ಆರೋಪ ಮಾಡುವ ಕಾಂಗ್ರೆಸ್​ಗೆ ಸರಿಯಾದ ಉತ್ತರವನ್ನು ಸಾಕ್ಷ್ಯಾಧಾರ ಕೊಟ್ಟಿದೆ. ಎನ್​ಐಎ ತನಿಖೆಯ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಹೇಳಿದ್ರು.

Intro:( ಬೈಟ್ ಕಳುಹಿಸಿದ್ದೇನೆ. ಆದರೆ ಕೇಬಲ್ ಪ್ರಾಬ್ಲಂ ನಿಂದ ಆಡಿಯೋ ಬಂದಿಲ್ಲ)

ಮಂಗಳೂರು: ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರು ಆರೋಪಿಗಳೆಂದು ಸಾಬೀತಾದರೆ ಒಂದು ಪೈಸೆಯು ಪರಿಹಾರವನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

Body:ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಂಗಳೂರು ಹಿಂಸಾಚಾರ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ 10 ಲಕ್ಷ ರೂ ಪರಿಹಾರವನ್ನು ಸರಕಾರ ಘೋಷಣೆ ಮಾಡಿದೆ. ಆದರೆ ಪರಿಹಾರ ಇನ್ನೂ ಕೊಟ್ಟಿಲ್ಲ. ಸಾವನ್ನಪ್ಪಿದವರು ಆರೋಪಪಟ್ಟಿಯಲ್ಲಿ ಇದ್ದಾರೆ. ಒಂದು ವೇಳೆ ಅವರು ಆರೋಪಿಗಳೆಂದು ಸಾಬೀತಾದರೆ ಒಂದು ಪೈಸೆಯು ಪರಿಹಾರ ಕೊಡುವುದಿಲ್ಲ ಎಂದರು.
ಮಂಗಳೂರು ಗಲಭೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದಿದ್ದೇನೆ. ವಾಹನದಲ್ಲಿ ಕಲ್ಲು ತಂದು ತೂರಾಟ ಮಾಡಲಾಗಿದ್ದು ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಪೊಲೀಸ್ ಠಾಣೆ ಬಳಿಯ ಶಸ್ತ್ರಾಸ್ತ್ರ ಅಂಗಡಿಗೂ ನುಗ್ಗುವ ಪ್ರಯತ್ನ ಆಗಿತ್ತು. ಈ ಬಗ್ಗೆ ಕೂಲಂಕಷವಾಗಿ ಸಮಗ್ರ ತನಿಖೆ ಮಾಡುತ್ತೇವೆ. ಆರೋಪ ಮಾಡುವ ಕಾಂಗ್ರೆಸ್ ಗೆ ಸರಿಯಾದ ಉತ್ತರವನ್ನು ಸಾಕ್ಷ್ಯಾಧಾರ ಕೊಟ್ಟಿದೆ. ಎನ್ ಐ ಎ ತನಿಖೆಯ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ರಾಜ್ಯಾದ್ಯಾಂತ ಪಕ್ಷ ಸಂಘಟನೆ ನಡೆಯುತ್ತಿದ್ದು ಮುಂದಿನ ಬಾರಿ 150 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಬೈಟ್- ಯಡಿಯೂರಪ್ಪ, ಮುಖ್ಯಮಂತ್ರಿ

Conclusion:
Last Updated : Dec 25, 2019, 1:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.