ಮಂಗಳೂರು: ಮಂಗಳೂರು ಹಿಂಸಾಚಾರದ ವೇಳೆ ಗೋಲಿಬಾರ್ಗೆ ಬಲಿಯಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣದ ತನಿಖೆಗಾಗಿ ಅಪರಾಧ ತನಿಖಾ ಇಲಾಖೆ (ಸಿಐಡಿ) ತಂಡ ಮಂಗಳೂರಿಗೆ ಆಗಮಿಸಿದೆ.
ಡಿಸೆಂಬರ್ 19 ರಂದು ಪೌರತ್ವ ಕಾಯಿದೆ (ತಿದ್ದುಪಡಿ) ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು.
ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೊಪ್ಪಿಸಿದ್ದು, ಸದ್ಯ ಪೊಲೀಸ್ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದೆ.
ಸಿಐಡಿ ಎಸ್.ಪಿ ರಾಹುಲ್ ಕುಮಾರ್ ಅವರ ನೇತೃತ್ವದ ತಂಡ ನಗರಕ್ಕೆ ಆಗಮಿಸಿದ್ದು, ವಿಚಾರಣೆ ಆರಂಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ನಾಳೆಯಿಂದ ಶುರುವಾಗಲಿದೆ.