ETV Bharat / state

ಒಡವೆ ಖರೀದಿಸಿ 4.13 ಲಕ್ಷ ರೂ. ಚೆಕ್ ಬೌನ್ಸ್ ಮಾಡಿ ವಂಚನೆ: ದೂರು ದಾಖಲು

author img

By

Published : Jul 16, 2021, 11:15 PM IST

ಆರೋಪಿ‌ ಫಾತಿಮಾ ಶರೀಫ್ ಎಂಬಾಕೆ ಅರುಣಾ ಜ್ಯುವೆಲ್ಲರಿ ಮಾಲಕ ಹರೀಶ್ ಜೆ. ಆಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಾಲದ ರೂಪದಲ್ಲಿ ಚಿನ್ನ ಬೇಕು, ಅದಕ್ಕೆ ಮುಂದಿನ ದಿನಾಂಕದ ಚೆಕ್ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಚಿನ್ನ ನೀಡಲಾಗಿತ್ತು‌. ಆದರೆ ಅವರು ನೀಡಿರುವ ಚೆಕ್ ಬೌನ್ಸ್ ಆಗಿತ್ತು.

Mulki Police Station
ಮುಲ್ಕಿ ಪೊಲೀಸ್ ಠಾಣೆ

ಮಂಗಳೂರು: ನಗರದ ಮುಲ್ಕಿ‌ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ರಸ್ತೆಯಲ್ಲಿರುವ ಅರುಣಾ ಜ್ಯುವೆಲ್ಲರಿಯಲ್ಲಿ ಒಡವೆ ಖರೀದಿಸಿ ನೀಡಿರುವ 4.13 ಲಕ್ಷ ರೂ.ನ ಚೆಕ್ ಬೌನ್ಸ್ ಆಗಿದ್ದು, ಬಳಿಕ ಹಣ ಕೊಡದೆ ವಂಚನೆಗೈಯಲಾಗಿದೆ ಎಂಬ ಕಾರಣಕ್ಕೆ ನಾಲ್ವರು ಆರೋಪಿಗಳ ಮೇಲೆ ದೂರು ದಾಖಲಾಗಿದೆ.

ಫಾತಿಮಾ ಶರೀಫ್, ರಮೀಝ್ ರಾಝ್, ಅಕ್ಬರ್, ಝೀನತ್ ಮೇಲೆ ದೂರು ದಾಖಲಾಗಿದೆ. ಪ್ರಕರಣದ ಮೊದಲ ಆರೋಪಿ‌ ಫಾತಿಮಾ ಶರೀಫ್ ಎಂಬಾಕೆ ಅರುಣಾ ಜ್ಯುವೆಲ್ಲರಿ ಮಾಲಕ ಹರೀಶ್ ಜೆ. ಆಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಾಲದ ರೂಪದಲ್ಲಿ ಚಿನ್ನ ಬೇಕು, ಅದಕ್ಕೆ ಮುಂದಿನ ದಿನಾಂಕದ ಚೆಕ್ ನೀಡುವುದಾಗಿ ಹೇಳಿದ್ದಾರೆ.

ಅದರಂತೆ ಚಿನ್ನ ನೀಡಲಾಗಿತ್ತು‌. ಆದರೆ ಅವರು ನೀಡಿರುವ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಆರೋಪಿಗಳಿಗೆ ತಿಳಿಸಿದಾಗ ತಾವು ವಾರದೊಳಗೆ ಕೊಡುವುದಾಗಿ‌ ತಿಳಿಸಿದ್ದಾರೆ. ಆದರೆ ಹಣ ಕೊಡದೆ ಮೋಸ ಮಾಡಿದ್ದರಿಂದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓದಿ: ಹಾವೇರಿಯಲ್ಲಿ ಮಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ: 23 ಮಂದಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.