ETV Bharat / state

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 01 ರಿಂದ 15ರ ವರೆಗೆ ಚಂಪಾಷಷ್ಠಿ ಮಹೋತ್ಸವ - ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವದ ವೇಳಾಪಟ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 01-12-2021ರಿಂದ ದಿನಾಂಕ 15-12-2021ರ ವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ.

champa shashti mahothsava to be held in kukke subramanya
ಚಂಪಾಷಷ್ಠಿ ಮಹೋತ್ಸವ
author img

By

Published : Nov 28, 2021, 9:48 AM IST

ಸುಬ್ರಹ್ಮಣ್ಯ: ವಿಶ್ವಪ್ರಸಿದ್ಧ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವವು ಇದೇ 01-12-2021ರಿಂದ ದಿನಾಂಕ 15-12-2021ರ ವರೆಗೆ ನಡೆಯಲಿದೆ.

champa shashti mahothsava to be held in kukke subramanya

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆದು ಬರುತ್ತಿರುವ ಚಂಪಾಷಷ್ಠಿ ಮಹೋತ್ಸವ ಇದೇ ಪ್ಲವ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಬುಧವಾರ 01-12-2021 ದಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಬುಧವಾರ ದಿನಾಂಕ 15-12-2021ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ಭಗವತ್ಸಂಕಲ್ಪ ಪ್ರಕಾರ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

  • 01-12-2021 ಬುಧವಾರ ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
  • 02-12-2021 ಗುರುವಾರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
  • 03-12-2021 ಶುಕ್ರವಾರ ಲಕ್ಷದೀಪೋತ್ಸವ
  • 04-12-2021 ಶನಿವಾರ ಶೇಷವಾಹನೋತ್ಸವ
  • 05-12-2021 ಆದಿತ್ಯವಾರ ಅಶ್ವವಾಹನೋತ್ಸವ
  • 06-12-2021 ಸೋಮವಾರ ಮಯೂರ ವಾಹನೋತ್ಸವ
  • 07-12-2021 ಮಂಗಳವಾರ ರಾತ್ರಿ ಹೂವಿನ ತೇರಿನ ಉತ್ಸವ
  • 08-12-2021 ಬುಧವಾರ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ
  • 09-12-2021 ಗುರುವಾರದಂದು ಪ್ರಾತಃ ಕಾಲದಲ್ಲಿ ಚಂಪಾಷಷ್ಠಿಯ ಮಹಾರಥೋತ್ಸವ
  • 10-12-2021 ಶುಕ್ರವಾರ ಅವಧೃತೋತ್ಸವ ಮತ್ತು ಶ್ರೀ ದೇವರ ನೌಕಾವಿಹಾರ
  • 15-12-2021 ಬುಧವಾರ ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ನಡೆಯಲಿದೆ ಎಂದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ.

    ಚಂಪಾಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆ

ದಿನಾಂಕ 30-11-2021 ಮಂಗಳವಾರ ಪ್ರಸಿದ್ದ "ಮೂಲಮೃತ್ತಿಕಾ" ಪ್ರಸಾದ ವಿತರಣೆ ನಡೆಯಲಿದೆ. ಕಿರುಷಷ್ಠಿ ಮಹೋತ್ಸವವು ದಿನಾಂಕ 08-01-2022 ರಂದು ಜರುಗುವುದು. ದಿನಾಂಕ 01-12-2021 ರಿಂದ 03-12-2021ರ ವರೆಗೆ ಭಕ್ತಾದಿಗಳು ದೇಗುಲಕ್ಕೆ ಒಪ್ಪಿಸುವ ಹಸಿರು ಕಾಣಿಕೆಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.