ETV Bharat / state

ಲಾಕರ್​ನಲ್ಲಿದ್ದ 4.50 ಲಕ್ಷ ರೂ. ಕಳವು: ರೆಸ್ಟೋರೆಂಟ್ ಸಿಬ್ಬಂದಿ ಮೇಲೆಯೇ ಮಾಲೀಕನ ಅನುಮಾನ..! - Mudbidri police station updates

ರೆಸ್ಟೋರೆಂಟ್​ನ ಲಾಕರ್​ನಲ್ಲಿ ಇಟ್ಟಿದ್ದ ಹಣ ಕಳುವಾದ ಹಿನ್ನೆಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆಯೇ ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಾನೆ.

Mudbidri police station
ಮೂಡುಬಿದಿರೆ ಪೊಲೀಸ್ ಠಾಣೆ
author img

By

Published : Dec 29, 2020, 12:47 AM IST

ಮಂಗಳೂರು: ರೆಸ್ಟೋರೆಂಟ್​​ ಲಾಕರ್​ನಲ್ಲಿಟ್ಟಿದ್ದ 4.50 ಲಕ್ಷ ರೂಪಾಯಿಯನ್ನು ಕದ್ದಿರುವ ಘಟನೆ ಮೂಡುಬಿದಿರೆ ತಾಲೂಕಿನ ಅಲಂಗಾರುವಿನ ಗೋಲ್ಡನ್ ಗೇಟ್ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ‌ ನಡೆದಿದೆ.

ಕೆಎಸ್​ಬಿಸಿಎಲ್ ಪರ್ಮಿಟ್ ಕಟ್ಟಬೇಕೆಂದು 4.50 ಲಕ್ಷ ರೂಪಾಯಿ ನಗದನ್ನು ಕಪ್ಪು ಬಣ್ಣದ ಬ್ಯಾಗ್​ನಲ್ಲಿರಿಸಿ ರಿಸೆಪ್ಷನ್ ಕೌಂಟರ್ ಬಳಿಯಿರುವ ಲಾಕರ್​ನಲ್ಲಿ ಇರಿಸಲಾಗಿತ್ತು. ಡಿಸೆಂಬರ್ 22ರ ಸಂಜೆ 5.30ಯಿಂದ 23ರ ಬೆಳಗ್ಗೆ 10 ಗಂಟೆಯ ಹಣವನ್ನು ಕಳವು ಮಾಡಲಾಗಿದೆ ಎಂದು ಹೊಟೇಲ್ ಮಾಲೀಕ ಕೃಷ್ಣಪ್ಪ ಕೊರಗ ಕರ್ಕೇರ ಹೇಳಿದ್ದಾರೆ.

ಇದನ್ನೂ ಓದಿ: 15 ಅಡಿ ಕೆಳಗಿದ್ದ ಮನೆ ಮೇಲೆ ಉರುಳಿ ಬಿದ್ದ ವಾಹನ: ಮೂವರಿಗೆ ಗಾಯ

ಈ ಕುರಿತು ಅವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೊಟೇಲ್ ನೌಕರರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ‌. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.