ETV Bharat / state

ಗಾಂಜಾ ಸೇವನೆ, ಮಾರಾಟ ಆರೋಪ: ಇಬ್ಬರ ಬಂಧನ

author img

By

Published : Feb 6, 2021, 1:55 PM IST

ಗಾಂಜಾ ಸೇವಿಸುತ್ತಿದ್ದ, ಮಾರಾಟ ಮಾಡುತ್ತಿದ್ದ ಆರೋಪದಡಿ ಮಂಗಳೂರಿನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇಬ್ಬರ ಬಂಧನ
ಇಬ್ಬರ ಬಂಧನ

ಮಂಗಳೂರು: ನಗರದಲ್ಲಿ ಗಾಂಜಾ ಸೇವನೆ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶಕ್ತಿ ನಗರದ ವಿಖ್ಯಾತ್ ಮತ್ತು ಮೊಹಮ್ಮದ್ ಶಫೀಕ್ ಬಂಧಿತರು. ವಿಖ್ಯಾತ್ ಎಂಬಾತ ಶಕ್ತಿನಗರ ಜಂಕ್ಷನ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಎಂಬ ಮಾಹಿತಿ ಬಂದ ಹಿನ್ನೆಲೆ ಕಂಕನಾಡಿ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗಲೂ ಆತ ಗಾಂಜಾ ಸೇವಿಸಿರುವುದು ದೃಢವಾಗಿದ್ದು, ಆತನನ್ನು ಬಂಧಿಸಲಾಗಿದೆ.

ಮೊಹಮ್ಮದ್ ಶಫೀಕ್ ಎಂಬಾತ ಮಂಗಳೂರಿನ ಗೂಡ್ ಶೆಡ್ ರೈಲ್ವೆ ಟ್ರಾಕ್ ಬಳಿ ಗಾಂಜಾ ಮಾರುತ್ತಿದ್ದ ವೇಳೆ ಮಂಗಳೂರಿನ ಪಾಂಡೇಶ್ವರ ಠಾಣಾ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈತನಿಂದ 190 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.