ಮಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜಿಡಿಪಿ ಕುಸಿಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿ ಅವರು ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಮೆರಿಕಾದ ಹೌಡಿ ಕಾರ್ಯಕ್ರಮದಲ್ಲಿ ಹೊಗಳಿ ಬಂದಿದ್ದಾರೆ ಎಂದು ಎಐಒಪಿ ಮುಖಂಡ ಅಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ಗಳ ವಿಲೀನ ವಿರೋಧಿಸಿ ವಿವಿಧ ಸಂಘಟನೆಗಳು ಜಂಟಿಯಾಗಿ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್ವರೆಗೆ ಹಮ್ಮಿಕೊಂಡಿದ್ದ ಕ್ಯಾಂಡಲ್ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ಜುಲೈ 19ರಂದು ರಾಷ್ಟ್ರೀಕರಣದ ಸುವರ್ಣ ಸಂಭ್ರಮವನ್ನು ಆಚರಿಸಿದ್ದೆವು. ಇದಾಗಿ ಒಂದೂವರೆ ತಿಂಗಳಲ್ಲಿ ವಿತ್ತ ಸಚಿವರು 10 ಬ್ಯಾಂಕ್ಗಳನ್ನು ವಿಲೀನ ಮಾಡಿ, ನಾಲ್ಕು ಬ್ಯಾಂಕ್ಗಳು ಉಳಿಯುತ್ತವೆ ಎಂದು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಬ್ಯಾಂಕ್ ವಿಲೀನದಿಂದ ಬ್ಯಾಂಕಿಂಗ್ ಉದ್ಯಮ ಧೂಳಿಪಟ ಮಾಡಲಾಗುತ್ತಿದೆ. ಆರ್ಥಿಕ ಅಭದ್ರತೆ ಸೃಷ್ಟಿಸಿರುವ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು, ನೌಕರರು ಸೇರಿ ಮೂರು ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.