ETV Bharat / state

ನಿಗದಿತ ಸಮಯ ಮುಗಿದು 17 ತಿಂಗಳು ಕಳೆದರೂ ಪೂರ್ಣಗೊಳ್ಳದ ಜಿಲ್ಲಾಧಿಕಾರಿ ಭವನ

ನಿಗದಿತ ಸಮಯ ಮುಗಿದು ವರ್ಷದ ಮೇಲಾದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭವನ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

construction is process
ಪ್ರಗತಿಯಲ್ಲಿರುವ ಕಾಮಗಾರಿ
author img

By

Published : Dec 4, 2020, 9:08 PM IST

ಮಂಗಳೂರು: ನಗರದ ಹೊರವಲಯದ ಪಡೀಲ್​​​ನಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭವನ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದ್ದು, ನಿಗದಿತ ಅವಧಿಗೆ ಪೂರ್ಣಗೊಂಡಿಲ್ಲ.

₹41 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿ ಆರಂಭಗೊಂಡಿದ್ದು 2018ರ ಫೆಬ್ರುವರಿ 9ರಂದು. ಆದರೆ 18 ತಿಂಗಳಲ್ಲಿ ಅಂದರೆ 2019ರ ಜುಲೈಗೆ ಪೂರ್ಣವಾಗಬೇಕಿದ್ದ ಈ ಕಾಮಗಾರಿ ಇನ್ನೂ ಕುಂಟುತ್ತಲೇ ಸಾಗುತ್ತಿದೆ.

ಪ್ರಗತಿಯಲ್ಲಿರುವದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭವನ ನಿರ್ಮಾಣ ಕಾಮಗಾರಿ

2014-15ರಲ್ಲಿ ಟೆಂಡರ್ ಕರೆಯಲಾಗಿದ್ದ ಈ ಯೋಜನೆಗೆ ₹41 ಕೋಟಿ ಮೀಸಲಿರಿಸಲಾಗಿತ್ತು‌. ಜಿಲ್ಲಾಧಿಕಾರಿ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯ ₹30 ಕೋಟಿ, ಆರೋಗ್ಯ ಇಲಾಖೆ ₹7 ಕೋಟಿ, ಕಾರ್ಮಿಕ ಇಲಾಖೆ ₹1 ಕೋಟಿ, ಸಣ್ಣ ನೀರಾವರಿ ₹1 ಕೋಟಿ, ಇತರ ಇಲಾಖೆಗಳಿಂದ ₹2 ಕೋಟಿ ಸೇರಿ ₹41 ಕೋಟಿ ಮೀಸಲಿರಿಸಲಾಗಿತ್ತು.

ಆದರೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಯೋಜನೆಗೆ ₹12ರಿಂದ 14 ಕೋಟಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.