ETV Bharat / state

ಬಂಟ್ವಾಳ: ಬುಡಾ ಕಚೇರಿ ಬಿ.ಸಿ.ರೋಡಿಗೆ ಸ್ಥಳಾಂತರ

ಕಳೆದ 2 ವರ್ಷಗಳ ಹಿಂದೆ ಬಿ.ಸಿ.ರೋಡ್‌ ನ ಪುರಸಭೆ ಕಟ್ಟಡದಲ್ಲಿ ಬುಡಾ ಕಚೇರಿ ಉದ್ಘಾಟನೆಗೊಂಡಿದ್ದರೂ ಪೂರ್ಣ ಪ್ರಮಾಣದ ಕಚೇರಿ ಸ್ಥಳಾಂತರ ಗೊಂಡಿರಲಿಲ್ಲ. ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಬಿ.ಸಿ. ರೋಡ್ ನಲ್ಲಿರುವ ಪುರಸಭೆ ಕಟ್ಟಡದಲ್ಲಿ ಪ್ರಾಧಿಕಾರಕ್ಕೆ ಮೀಸಲಿರಿಸಲಾದ ಕಚೇರಿಗೆ ಸ್ಥಳಾಂತರಗೊಂಡಿದೆ.

author img

By

Published : Jun 25, 2020, 9:25 PM IST

Buda office
Buda office

ಬಂಟ್ವಾಳ: ಕಳೆದ 10 ವರ್ಷಗಳಿಂದ ಬಂಟ್ವಾಳ ಪುರಸಭೆ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬುಡಾ) ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಬಿ.ಸಿ. ರೋಡ್ ನಲ್ಲಿರುವ ಪುರಸಭೆ ಕಟ್ಟಡದಲ್ಲಿ ಪ್ರಾಧಿಕಾರಕ್ಕೆ ಮೀಸಲಿರಿಸಲಾದ ಕಚೇರಿಗೆ ಸ್ಥಳಾಂತರಗೊಂಡಿದೆ.

ಬುಡಾ ಅಧ್ಯಕ್ಷರಾಗಿ ಬಿ.ದೇವದಾಸ್ ಶೆಟ್ಟಿ ನೇಮಕಗೊಂಡಿದ್ದು, ಮಾರ್ಚ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ್ದರು. ಕಳೆದ 2 ವರ್ಷಗಳ ಹಿಂದೆ ಬಿ.ಸಿ.ರೋಡ್‌ ನ ಪುರಸಭೆ ಕಟ್ಟಡದಲ್ಲಿ ಬುಡಾ ಕಚೇರಿ ಉದ್ಘಾಟನೆಗೊಂಡಿದ್ದರೂ ಪೂರ್ಣ ಪ್ರಮಾಣದ ಕಚೇರಿ ಸ್ಥಳಾಂತರ ಗೊಂಡಿರಲಿಲ್ಲ.

ಮುಂದಿನ ದಿನಗಳಲ್ಲಿ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು ಕೂಡಾ ಇದೇ ಕಚೇರಿಯಲ್ಲಿ ನಡೆಯಲಿದೆ. ಬಂಟ್ವಾಳ ಕಸ್ಬಾ, ಬಿ. ಮೂಡ, ಪಾಣೆಮಂಗಳೂರು ಗ್ರಾಮಗಳು ಹಾಗೂ ನರಿಕೊಂಬು, ಅಮಾಡಿ ಗ್ರಾಮಗಳ ಭಾಗಶಃ ವ್ಯಾಪ್ತಿಯನ್ನು ಈ ಕಚೇರಿ ಹೊಂದಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.