ETV Bharat / state

ಭದ್ರನೆಲೆಯಲ್ಲಿ ಬಿಜೆಪಿಗೆ 2 ಕ್ಷೇತ್ರ ನಷ್ಟ: ಪುತ್ತೂರು, ಮಂಗಳೂರು 'ಕೈ' ವಶ

author img

By

Published : May 13, 2023, 4:21 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು ಕಾಂಗ್ರೆಸ್​ 2 ಸ್ಥಾನಗಳನ್ನು ಗೆದ್ದುಕೊಂಡಿದೆ.

dakshina-kannada
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ: ಇಡೀ ಭಾರತವೇ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ಭದ್ರಕೋಟೆ ಎಂದೇ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಭಾರಿ ಮತ್ತೊಮ್ಮೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 6 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. 2 ಕ್ಷೇತ್ರ 'ಕೈ' ವಶವಾಗಿದೆ.

5ನೇ ಬಾರಿ ಖಾದರ್​ಗೆ​ ಗೆಲುವು (ಮಂಗಳೂರು): ದಕ್ಷಿಣ ಕನ್ನಡದಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಕ್ಷೇತ್ರ ಮಂಗಳೂರು. ಹೆಸರಿಗೆ ಮಂಗಳೂರು ಕ್ಷೇತ್ರವಾದರೂ ಇದು ನೈಜವಾಗಿ ಮಂಗಳೂರು ನಗರದಿಂದ ಹೊರಗಿದೆ. ಉಳ್ಳಾಲ ಕ್ಷೇತ್ರವೆಂದೇ ಜನಜನಿತವಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯು.ಟಿ.ಖಾದರ್​ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಂಗಳೂರಿನ ಶಾಸಕರಾಗಿ 5ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇವರ ಎದುರಾಳಿಯಾಗಿ ಬಿಜೆಪಿಯಿಂದ ಸತೀಶ್​ ಕುಂಪಲ ಸ್ಪರ್ಧಿಸಿದ್ದರು.

ವೇದವ್ಯಾಸ ಕಾಮತ್​ಗೆ ಜಯ (ಮಂಗಳೂರು ದಕ್ಷಿಣ): ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಬಿಗ್​ ಫೈಟ್ ಇತ್ತು. ವೇದವ್ಯಾಸ ಕಾಮತ್​ ಮತ್ತು ಜೆ.ಆರ್.​ಲೋಬೋ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್​ 83 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡು 22 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಭರತ್​ ಶೆಟ್ಟಿಗೆ ಭರ್ಜರಿ ಗೆಲುವು (ಮಂಗಳೂರು ಉತ್ತರ): ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್​ ಶೆಟ್ಟಿ.ವೈ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಇನಾಯತ್​ ಅಲಿ ಹಿಂದಿಕ್ಕಿ 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಿಸಿದ್ದಾರೆ. ಭರತ್​ ಶೆಟ್ಟಿ ಒಟ್ಟು 1,03,531 ಮತಗಳನ್ನು ಪಡೆದುಕೊಂಡಿದ್ದಾರೆ.

ರಮಾನಾಥ್​ ರೈ ವಿರುದ್ಧ ಗೆದ್ದ ರಾಜೇಶ್​ ನಾಯ್ಕ್​ (ಬಂಟ್ವಾಳ): ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಮಾನಾಥ ರೈ ಅವರನ್ನು ಹಿಂದಿಕ್ಕಿ ಬಿಜೆಪಿ ಅಭ್ಯರ್ಥಿ ರಾಜೇಶ್​ ನಾಯ್ಕ್​ ಗೆಲುವಿನ ನಗೆ ಬೀರಿದ್ದಾರೆ. ಭಾರಿ ಪೈಪೋಟಿಯಲ್ಲಿ ಸ್ಪರ್ಧೆ ನಡೆದಿದ್ದು, ರಾಜೇಶ್​ ನಾಯ್ಕ್​ 8 ಸಾವಿರ ಮತಗಳ ಅಂತರದಿಂದ ಗೆದ್ದರು.

ಉಮಾನಾಥ್​ ಕೋಟ್ಯಾನ್ ಜಯಭೇರಿ​ (ಮೂಡುಬಿದಿರೆ): ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್​ ಕೋಟ್ಯಾನ್​ ಜಯಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಮಿಥುನ್​ ರೈ ವಿರುದ್ಧ 22 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಉಮಾನಾಥ್​ ಇದೀಗ ಮತ್ತೆ ಮೂಡುಬಿದಿರೆ ಕ್ಷೇತ್ರದಲ್ಲಿ ಗೆದ್ದು ಮತ್ತೊಮ್ಮೆ ಶಾಸಕ ಸ್ಥಾನಕ್ಕೇರಿದ್ದಾರೆ.

ಮತ್ತೆ ಶಾಸಕರಾದ ಹರೀಶ್​ ಪೂಂಜಾ (ಬೆಳ್ತಂಗಡಿ): ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೊಂದಿಕೊಂಡಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಜೋರಾಗಿಯೇ ಇತ್ತು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರೀಶ್ ಪೂಂಜಾ ಅವರು ಮಾಜಿ ಶಾಸಕ ಕೆ.ವಸಂತ ಬಂಗೇರರನ್ನು ಸೋಲಿಸಿ, ಪ್ರಥಮ ಬಾರಿಗೆ ಈ ಕ್ಷೇತ್ರದ ಶಾಸಕರಾದರು. ಇದೀಗ ಕಾಂಗ್ರೆಸ್​ ಅಭ್ಯರ್ಥಿ ರಕ್ಷಿತ್​ ಶಿವರಾಮ್​ ಸೋಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. 18 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್​ ಬಾವುಟ (ಪುತ್ತೂರು): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿಯ ಭದ್ರಕೋಟೆ. ಹಿಂದೂ ಸಂಘಟನೆಗಳ ಪ್ರಾಬಲ್ಯವಿರುವ ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿತ್ತು. ಹಾಗಾಗಿಯೇ ಮಹಿಳಾ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಿತ್ತು. ಆದರೆ ಬಿಜೆಪಿ ಟಿಕೆಟ್​ಗಾಗಿ ತೀವ್ರ ಪ್ರಯತ್ನ ನಡೆಸಿದ್ದ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ಸಿಗದ ಕಾರಣ ಹಿಂದೂ ಕಾರ್ಯಕರ್ತರು ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿದ್ದರು. ಕಾಂಗ್ರೆಸ್​ನಿಂದ ಅಶೋಕ್​ ರೈ ಚುನಾವಣಾ ಕಣಕ್ಕೆ ಧುಮುಕಿದ್ದರು. ಹೀಗಾಗಿ ಪುತ್ತೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಇದೀಗ ಫಲಿತಾಂಶ ಎಲ್ಲ ಚುನಾವಣಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ಪುತ್ತೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಶೋಕ್​ ರೈ ಗೆಲುವು ಸಾಧಿಸಿದ್ದಾರೆ. ಅರುಣ್​ ಪುತ್ತಿಲ ಮತ್ತು ಅಶೋಕ್​ ರೈ ಮಧ್ಯೆ ಮತ ಎಣಿಕೆಯ ಕೊನೆಯವರೆಗೂ ಭಾರಿ ಪೈಪೋಟಿ ಇತ್ತು. ಕೊನೆಗೂ ಮುನ್ನಡೆ ಪಡೆದ ಅಶೋಕ್​ ರೈ 4000 ಸಾವಿರ ಮತಗಳ ಅಂತರದಿಂದ ಜಯಿಸಿದ್ದಾರೆ.

35 ವರ್ಷಗಳ ಬಳಿಕ ಮಹಿಳಾ ಶಾಸಕಿ (ಸುಳ್ಯ): ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ಅಂಗಾರ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994 ರಲ್ಲಿ ಗೆದ್ದ ಅಂಗಾರ 2023ರವರೆಗೂ ಎಂ.ಎಲ್.​ಎ ಆಗಿ ಅಧಿಕಾರದಲ್ಲಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂಗಾರರಿಗೆ ಅವಕಾಶ ನೀಡದೆ ಬಿಜೆಪಿ ಸರ್ಕಾರವು ಸಾಮಾನ್ಯ ಮಹಿಳಾ ಕಾರ್ಯಕರ್ತೆಗೆ ಟಿಕೆಟ್​ ನೀಡಿತು.

ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸುಮಾರು 35 ವರ್ಷಗಳ ನಂತರ ಇಂದು ಸುಳ್ಯ ಮೀಸಲು ಕ್ಷೇತ್ರದ ನೂತನ ಶಾಸಕಿಯಾಗಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ ವಿರುದ್ಧ 28 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಇಂದು ಮತ ಪ್ರಭುವಿನ ಮಹಾತೀರ್ಪು! ಚುನಾವಣಾ ಕಣದಲ್ಲಿ ಧೂಳೆಬ್ಬಿಸಿದ 'ಕೈ' ಕಲಿಗಳು - ಬಿಜೆಪಿಗೆ ಬಿಗ್​ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.