ಉಳ್ಳಾಲ: ಕೋವಿಡ್ ಕಾರಣದಿಂದಾಗಿ ಮೃತಪಟ್ಟ 12 ಮಂದಿಗೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಸಂಪ್ರದಾಯದಂತೆ ಸೋಮನಾಥನ ಸನ್ನಿಧಿಯಲ್ಲಿ ಅವರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಕೊರೊನಾ ಸೋಂಕಿಗೆ ಬಲಿಯಾದ 12 ಮಂದಿ ನಿರ್ಗತಿಕರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ತಿಲಹೋಮ ನಡೆಸಿ ಚಿತಾಭಸ್ಮ ಸಮುದ್ರಕ್ಕೆ ಬಿಟ್ಟು ಬಳಿಕ ಮಾತನಾಡಿದರು.
ರಾಜ್ಯದ ಕಂದಾಯ ಸಚಿವರಾದ ಆರ್.ಅಶೋಕ್ ನೇತೃತ್ವದಲ್ಲಿ ಮೃತ ನಿರ್ಗತಿಕರ ಅಂತರಾತ್ಮಗಳಿಗೆ ಮೋಕ್ಷಪ್ರದ ಆಗಬೇಕು. ನಿರ್ಗತಿಕರು ಮಾತ್ರವಲ್ಲದೇ ಕುಟುಂಬಸ್ಥರು ಬಾರದ ಮಂದಿಯ ಆತ್ಮಕ್ಕೆ ಸದ್ಗತಿ ಸಿಗುವ ಉದ್ದೇಶದಿಂದ ಕಾರ್ಯ ನಡೆಸಿದ್ದರು.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಎಲ್ಲರ ಚಿತಾಭಸ್ಮವನ್ನು ಸೋಮೇಶ್ವರದ ಸಮುದ್ರಕ್ಕೆ ಸಮರ್ಪಣೆ ಮಾಡಲಾಗಿದೆ ಎಂದರು. ತಾ.ಪಂ. ಸದಸ್ಯ ರವಿಶಂಕರ್ ಸೋಮೇಶ್ವರ ತಿಲ ಹೋಮದಲ್ಲಿ ಕುಳಿತು ಕಾರ್ಯ ನೆರವೇರಿಸಿದರು.