ETV Bharat / state

ಬಿಜೆಪಿಯವರು ಹಿಂದೂಪರ ಎಂದು ಘೋರ ಸುಳ್ಳು ಹೇಳಿ ಜೀವನ‌ ಮಾಡುತ್ತಿದ್ದಾರೆ: ರಿಷಿ ಕುಮಾರ ಸ್ವಾಮೀಜಿ

ಗೋಹತ್ಯೆ ನಿಷೇಧ ಕಾನೂನು ತರದಿರುವುದು ಮತ್ತು ಕಪಿಲ ತಳಿಯ ಗೋಶಾಲೆಯ ಜಾಗವನ್ನು ಸರ್ಕಾರ ಭೂಸ್ವಾಧೀನ ಮಾಡಿ ಕೋಸ್ಟ್ ಗಾರ್ಡ್​ನವರಿಗೆ ನೀಡಲು ಯೋಜನೆ ಹಾಕಿದ್ದನ್ನು ಖಂಡಿಸಿರುವ ರಿಷಿಕುಮಾರ ಸ್ವಾಮೀಜಿ, ಕಟೀಲ್ ಅವರು ಕೇಂದ್ರದ ಗಮನಕ್ಕೆ ತಂದು ಈ ಗೋಶಾಲೆಯನ್ನು ಉಳಿಸಲಿ ಎಂದು ಆಗ್ರಹಿಸಿದ್ದಾರೆ.

BJP leaders are lying lie for vote; Rishi Kumar Swamiji
ರಿಷಿ ಕುಮಾರ ಸ್ವಾಮೀಜಿ
author img

By

Published : Nov 24, 2020, 7:25 PM IST

ಮಂಗಳೂರು: ಬಿಜೆಪಿಯವರು ಹಿಂದೂಪರ ಎಂದು ಘೋರ ಸುಳ್ಳು ಹೇಳಿ ಜೀವನ‌ ನಡೆಸುತ್ತಿದ್ದಾರೆ ಎಂದು ಕಾಳಿಕಾ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವನತಿ ಅಂಚಿನಲ್ಲಿರುವ ಕಪಿಲ ತಳಿಯ ಗೋಶಾಲೆಯ ಜಾಗವನ್ನು ಸರ್ಕಾರ ಭೂಸ್ವಾಧೀನ ಮಾಡಿ ಕೋಸ್ಟ್ ಗಾರ್ಡ್​ನವರಿಗೆ ನೀಡಲು ಯೋಜನೆ ಹಾಕಿದೆ. ಗೋವನ್ನು ರಕ್ಷಿಸುತ್ತಿರುವ ಕಪಿಲ ಪಾರ್ಕ್ಅನ್ನು ಸ್ವಾಧೀನಗೊಳಿಸಲು ಕಪಿಲಾ ಪಾರ್ಕ್​ನ ಪ್ರಕಾಶ್ ಶೆಟ್ಟಿ ಮತ್ತು ಅಲ್ಲಿನ ಸಿಬ್ಬಂದಿಗೆ ಸರ್ಕಾರದ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂದು ಆಪಾದಿಸಿದರು.

ಇದನ್ನೂ ಓದಿ: ಬೇಕೆಂದಾಗೆಲ್ಲ ಕರ್ನಾಟಕ ಬಂದ್ ಮಾಡಲು ಇದು ಅವರ ಅಪ್ಪನ ಆಸ್ತಿಯಾ? ರಿಷಿ ಕುಮಾರ ಸ್ವಾಮೀಜಿ ಪ್ರಶ್ನೆ

ಬಿಜೆಪಿ ಸರ್ಕಾರ ಬಂದ ಬಳಿಕ 24 ಗಂಟೆಯಲ್ಲಿ ಗೋಹತ್ಯೆ ನಿಷೇಧ ಕಾನೂನು ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಆದರೆ, ಗೋಹತ್ಯೆ ನಿಷೇಧ ಮಾಡುತ್ತಾರೋ, ಗೋಶಾಲೆ ನಿಷೇಧ ಮಾಡುತ್ತಿದ್ದಾರೋ ತಿಳಿಯದಾಗಿದೆ ಎಂದರು.

ರಿಷಿ ಕುಮಾರ ಸ್ವಾಮೀಜಿ

ಕೇಸರಿ ಶಾಲು ಹಾಕಿ ಜೈ ಗೋಮಾತೆ ಎಂದು ಮತ ಪಡೆದ ಸಂಸದ ನಳಿನ್ ಕುಮಾರ್ ಕಟೀಲ್, ಹಿಂದೂಗಳ ಮತ ಪಡೆದು ಮುಖ್ಯಮಂತ್ರಿಯಾದ ಯಡಿಯೂರಪ್ಪನವರಿಗೆ ಗೋಶಾಲೆಗೆ ಆಗಿರುವ ಅನ್ಯಾಯ ಕಾಣಿಸುತ್ತಿಲ್ಲವೆ? ಎಂದು ಪ್ರಶ್ನಿಸಿದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರದ ಗಮನಕ್ಕೆ ತಂದು ಈ ಗೋಶಾಲೆಯನ್ನು ಉಳಿಸಲಿ ಎಂದು ಅವರು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.