ಮಂಗಳೂರು: ಮೂಡಬಿದ್ರೆ ತಾಲೂಕಿನ ಬೆಳುವಾಯಿಯಲ್ಲಿ ಟೆಂಪೋ-ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಶಿರ್ತಾಡಿಯ ಬಿಜೆಪಿ ನಾಯಕ ಮೃತಪಟ್ಟಿದ್ದಾರೆ.
ಬಿಜೆಪಿ ಶಿರ್ತಾಡಿ ಮಹಾಶಕ್ತಿ ಕೇಂದ್ರದ ಬೆಳುವಾಯಿ ಕುಕ್ಕುಡೆಲು ಗ್ರಾಮದ 1 ನೇ ವಾರ್ಡ್ನ ಅಧ್ಯಕ್ಷ ಪವನ್ ಮೃತಪಟ್ಟವರು.
ಕಳೆದ ಶನಿವಾರ ರಾತ್ರಿ ಬೆಳುವಾಯಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮೂಲಕ ಕಾಂತಾವರಕ್ಕೆ ಹೋಗುತ್ತಿದ್ದಾಗ ಮಿನಿ ಟೆಂಪೋಗೆ ಬೈಕ್ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.