ETV Bharat / state

ಮರ್ದಾಳ ಗ್ರಾಪಂ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆ - Sullia latest news

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಮರ್ದಾಳ ಗ್ರಾಮ ಪಂಚಾಯತ್‌ನ 102ನೇ ನೆಕ್ಕಿಲಾಡಿ ಗ್ರಾಮದ 2ನೇ ವಾರ್ಡ್‌ನ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬೆಜೆಪಿ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆ
author img

By

Published : Nov 5, 2019, 5:47 AM IST

Updated : Nov 5, 2019, 7:27 AM IST

ಕಡಬ/ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಮರ್ದಾಳ ಗ್ರಾಮ ಪಂಚಾಯತ್‌ನ 102ನೇ ನೆಕ್ಕಿಲಾಡಿ ಗ್ರಾಮದ 2ನೇ ವಾರ್ಡ್‌ನ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರ್ವೋತ್ತಮ ಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನ. 12ರಂದು ನಡೆಯಬೇಕಿದ್ದ ಉಪ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ 102ನೇ ನೆಕ್ಕಿಲಾಡಿ ಗ್ರಾಮದ ಪಂಜೋಡಿ ನಿವಾಸಿ ಸರ್ವೋತ್ತಮ ಗೌಡ, ಅಚ್ಚಿಮನೆ ನಿವಾಸಿ ಚಂದ್ರಶೇಖರ ಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೇರಂಜ ಮನೆ ನಿವಾಸಿ ಭವಾನಿ ಶಂಕರ ಬಿ. ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಚಂದ್ರಶೇಖರ ಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವಾನಿ ಶಂಕರ ನಾಮಪತ್ರ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸರ್ವೋತ್ತಮ ಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Intro:ಕಡಬ/ಸುಳ್ಯ

ಸುಳ್ಯ ವಿಧಾನಸಭಾ ಕ್ಷೇತ್ರದ ಮರ್ದಾಳ ಗ್ರಾಮ ಪಂಚಾಯತ್‌ನ 102ನೇ ನೆಕ್ಕಿಲಾಡಿ ಗ್ರಾಮದ 2ನೇ ವಾರ್ಡ್‌ನ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರ್ವೋತ್ತಮ ಗೌಡರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ನ.12ರಂದು ನಡೆಯಬೇಕಿದ್ದ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ 102ನೇ ನೆಕ್ಕಿಲಾಡಿ ಗ್ರಾಮದ ಪಂಜೋಡಿ ನಿವಾಸಿ ವಿಶ್ವನಾಥ ಗೌಡರವರ ಪುತ್ರ ಸರ್ವೋತ್ತಮ ಗೌಡ, 102ನೇ ನೆಕ್ಕಿಲಾಡಿ ಗ್ರಾಮದ ಅಚ್ಚಿಮನೆ ನಿವಾಸಿ ದಿ.ವೀರಪ್ಪ ಗೌಡರವರ ಪುತ್ರ ಚಂದ್ರಶೇಖರ ಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ 102ನೇ ನೆಕ್ಕಿಲಾಡಿ ಗ್ರಾಮದ ಮೇರಂಜ ಮನೆ ನಿವಾಸಿ ಸೂರಪ್ಪ ಗೌಡರವರ ಪುತ್ರ ಭವಾನಿಶಂಕರ ಬಿ.,ರವರು ನಾಮಪತ್ರ ಸಲಿಸಿದ್ದರು.

ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನವಾಗಿದ್ದ ನ.4ರಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಚಂದ್ರಶೇಖರ ಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಭವಾನಿ ಶಂಕರ ಬಿ.,ರವರು ನಾಮಪತ್ರ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸರ್ವೋತ್ತಮ ಗೌಡರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.Body:ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ ಬಿ.,ರವರು ಚುನಾವಣಾಧಿಕಾರಿಯಾಗಿ ಹಾಗೂ ಕಡಬ ತಾಲೂಕು ಕಚೇರಿ ಉಪತಹಶೀಲ್ದಾರ್ ಮನೋಹರ ಕೆ.ಟಿ.ಯವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.Conclusion:ಸ್ಥಾನ ಉಳಿಸಿಕೊಂಡ ಬಿಜೆಪಿ:
9 ಸದಸ್ಯ ಬಲದ ಮರ್ದಾಳ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ 6 ಹಾಗೂ ಕಾಂಗ್ರೆಸ್ ಬೆಂಬಲಿತ 3 ಸದಸ್ಯರಿದ್ದರು. ಈ ಪೈಕಿ 102ನೇ ನೆಕ್ಕಿಲಾಡಿ ಗ್ರಾಮದ ವಾರ್ಡ್ ನಂ.2ನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ದಾಮೋದರ ಗೌಡ ಡೆಪ್ಪುಣಿಯವರು ಅನಾರೋಗ್ಯದಿಂದಾಗಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ 5ಕ್ಕೆ ಕುಸಿದಿತ್ತು. ಇದೀಗ ತೆರವಾಗಿದ್ದ ಸ್ಥಾನಕ್ಕೆ ಘೋಷಣೆಯಾಗಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸರ್ವೋತ್ತಮ ಗೌಡರವರು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಇದೀಗ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಮತ್ತೆ 6ಕ್ಕೆ ಏರಿಕೆಯಾಗಿದೆ
Last Updated : Nov 5, 2019, 7:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.