ETV Bharat / state

ಕರಿಮಣಿ, ಕಿವಿಯೋಲೆ ಮಾರಿ ಬದುಕು ನಡೆಸುವ ಸ್ಥಿತಿ ಬಂದಿದೆ: ಬೀಡಿ ಕಾರ್ಮಿಕರ ಅಳಲು

ಬೀಡಿ ಕಾರ್ಮಿಕರಿಗೆ ಕನಿಷ್ಠ 6 ಸಾವಿರ ರೂಪಾಯಿ ಪರಿಹಾರವನ್ನು ಶೀಘ್ರವೇ ಘೋಷಣೆ ಮಾಡಬೇಕು ಎಂದು ಕೋಟೆಕಾರು ಬೀಡಿ ಲೇಬರ್ಸ್ ಯೂನಿಯನ್ ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಆಗ್ರಹಿಸಿದ್ದಾರೆ.

beedi workers protest in ullal
ಕೋಟೆಕಾರು ಬೀಡಿ ಲೇಬರ್ಸ್ ಯೂನಿಯನ್ ಪ್ರತಿಭಟನೆ
author img

By

Published : Jun 10, 2020, 11:14 PM IST

ಉಳ್ಳಾಲ: ಲಾಕ್​ಡೌನ್​ನಿಂದಾಗಿ ಕರಿಮಣಿ, ಕಿವಿಯೋಲೆ ಮಾರಿ ಬದುಕು ನಡೆಸುವ ಸ್ಥಿತಿಗೆ ಬೀಡಿ ಕಾರ್ಮಿಕರು ತಲುಪಿದ್ದಾರೆ. ರಾಜ್ಯ ಸರಕಾರ ಕಲ್ಯಾಣ ಮಂಡಳಿಯಾಗಲಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಾಗಲಿ, ಬೀಡಿ ಕಂಪನಿ ಮಾಲೀಕರಿಂದಾಗಲಿ ಪರಿಹಾರವೇ ಬಂದಿಲ್ಲ ಎಂದು ಕೋಟೆಕಾರು ಬೀಡಿ ಲೇಬರ್ಸ್ ಯೂನಿಯನ್ ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಹೇಳಿದ್ದಾರೆ.

ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್​ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೊರೊನಾದಿಂದ ಕಂಗೆಟ್ಟ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಯಾವುದೇ ರೀತಿಯ ಪರಿಹಾರ ಘೋಷಣೆಯಾಗಿಲ್ಲ. ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಅತ್ಯಂತ ಬಡ ಕಾರ್ಮಿಕ ವಿಭಾಗವಾದ ಬೀಡಿ ಕಾರ್ಮಿಕರು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದಾರೆ.

ಕೋಟೆಕಾರು ಬೀಡಿ ಲೇಬರ್ಸ್ ಯೂನಿಯನ್ ಪ್ರತಿಭಟನೆ

ಲಾಕ್​ಡೌನ್ ನಿಯಮ ಸಡಿಲಗೊಳಿಸಿದ್ದರೂ ಸಮಸ್ಯೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕನಿಷ್ಠ 6 ಸಾವಿರ ರೂಪಾಯಿ ಪರಿಹಾರವನ್ನು ಶೀಘ್ರವೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಉಪತಹಶೀಲ್ದಾರ್ ವಿನಯ್. ಎಸ್ ರಾವ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಿಐಟಿಯು ಉಳ್ಳಾಲ ವಲಯ ಉಪಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಕೋಶಾಧಿಕಾರಿ ವಿಲಾಸಿನಿ ತೊಕ್ಕೊಟ್ಟು, ಸುಂದರ್ ಕುಂಪಲ, ಶ್ರೀನಿವಾಸ ಉಳ್ಳಾಲಬೈಲ್, ರಾಧಾ, ಹರಿಣಾಕ್ಷಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.