ಬಂಟ್ವಾಳ (ದಕ್ಷಿಣ ಕನ್ನಡ): ಮಲಗಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣ 'ಕೊಲೆ' ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಮೃತವ್ಯಕ್ತಿಯ ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಪೂರ್ಲಪ್ಪಾಡಿ ನಿವಾಸಿ ಯೋಗೀಶ್ ಗೌಡ (34), ಆಶಾ ಕೆ.(32) ಬಂಧಿತರು. ಅರವಿಂದ ಭಾಸ್ಕರ ಕೊಲೆಯಾದ ವ್ಯಕ್ತಿ.
ವಿವರ: ಇಲ್ಲಿಯ ಇಡ್ಕಿದು ಗ್ರಾಮದಲ್ಲಿ ಚೈತನ್ಯಕುಮೇರು ಎಂಬಲ್ಲಿ ವಾಸಿಸುತ್ತಿದ್ದ ಅರವಿಂದ ಭಾಸ್ಕರ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಇದನ್ನು ಕೊಲೆ ಪ್ರಕರಣವೆಂದು ಶಂಕಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ದೂರಿನ ಮೇರೆಗೆ ಪೊಲೀಸರು ಭಾಸ್ಕರ್ ಪತ್ನಿ ಆಶಾ ಮತ್ತು ಆಕೆಯ ಸ್ನೇಹಿತ ಯೋಗಿಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರನ್ನು ದಸ್ತಗಿರಿ ಮಾಡಲಾಗಿದೆ. ರಘುನಾಥ ಎಂಬವರು ನೀಡಿದ ದೂರಿನಂತೆ ಹತ್ಯೆ ಮತ್ತು ಎಸ್.ಸಿ.ಎಸ್.ಟಿ. ಪಿಒಎ ಆಕ್ಟ್‌ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಫೆಬ್ರವರಿ 25ರ ರಾತ್ರಿ ಇಬ್ಬರೂ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿರಬಹುದು ಎಂಬ ಶಂಕೆಯನ್ನು ದೂರುದಾರರು ವ್ಯಕ್ತಪಡಿಸಿದ್ದು ತನಿಖೆ ಸಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆ ಕೊಲೆಗೆ ಮಗನಿಂದಲೇ ಸುಫಾರಿ: ಪುತ್ರ ಸೇರಿ ಮೂವರ ಬಂಧನ
ಪೊಲೀಸ್ ಠಾಣೆಗೆ ನುಗ್ಗಿ ಅಸಭ್ಯ ವರ್ತನೆ: ತುಮಕೂರು ಯೂತ್ ಕಾಂಗ್ರೆಸ್ ಅಧ್ಯಕ್ಷನ ಬಂಧನ